ಚಿಕ್ಕಮಗಳೂರು : ಜ್ಯೋತಿಷಿ ಮಾತಿಗೆ ಹೆದರಿ ಗ್ರಾಮವನ್ನೇ ತೊರೆದ ಜನರು….!

ಚಿಕ್ಕಮಗಳೂರು :  ಸುಮಾರು 60ಅಲೆಮಾರಿ ಸಮುದಾಯದ ಹಾವು ಗೊಲ್ಲರು ಜ್ಯೋತಿಷಿ ಹೇಳಿದ ಮಾತಿಗೆ ಹೆದರಿ ಊರನ್ನೇ ತೊರೆದು ಹೋಗಿರುವ ಪ್ರತ್ಯಕ್ಷ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸೀಗುವಾನಿ ಗ್ರಾಮದಲ್ಲಿ ನಡೆದಿದೆ.

ಮೂಲಭೂತ ಸೌಕರ್ಯಗಳಿಂದ ದೂರ ಉಳಿದಿದ್ದ ಇವರುಗಳು ಕೆಟ್ಟ ಚಟಗಳಿಗೆ ಬಲಿಯಾಗಿ ಆರೋಗ್ಯ ಸಮಸ್ಯೆಯಿಂದ ಪ್ರತಿದಿನ ಬಳಲುತ್ತಿದ್ರು. ಕೆಲವು ದಿನಗಳಿಂದ ಸಾವು ನೋವುಗಳು ಪ್ರಾರಂಭವಾಗುತ್ತಿದಂತ್ತೇ ಭಯಗೊಂಡ ಗ್ರಾಮದವರು ಕೇರಳ ಮೂಲದ ಮಂತ್ರವಾದಿ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ತಾರೆ, ಇದಕ್ಕೆ ಪರಿಹಾರ ನೀಡಿದ ಮಂತ್ರವಾದಿ  ನೀವು ನಾಗರ ಕಟ್ಟೆ ಪ್ರತಿಷ್ಠಾಪನೆ ಮಾಡ್ಬೇಕು ಅಂತ ತಿಳಿಸುತ್ತಾರೆ, ಆದ್ರೂ ಸಹ ಸಾವು ನೋವುಗಳು ಮಾತ್ರ ನಿಂತಿರಲಿಲ್ಲ.

ನೆನ್ನೆ ಇದಕ್ಕಿದಂತೆ  ಸ್ಥಳಕ್ಕೆ ಬಂದ ಕೇರಳ ಮೂಲದ ಮಂತ್ರವಾದಿ  ಇಲ್ಲಿ ಒಂದು ಆತ್ಮ ಓಡಾಡುತ್ತಿದೆ ‘ಬರುವ ಚಂದ್ರಗ್ರಹಣದೊಳಗೆ ಊರು ಖಾಲಿ ಮಾಡದಿದ್ದರೆ ಇನ್ನಷ್ಟು ಮಂದಿ ಸತ್ತು ಹೋಗುತ್ತೀರಿ’ ನಿವೇನಾದ್ರು ಗ್ರಾಮ ತೊರೆಯದಿದ್ದರೆ ರಕ್ತಕಾರಿ ಸಾಯುತ್ತಿರಿ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ ಹೋಗಿದ್ದಾರು, ಇದಕ್ಕೆ ಹೆದರಿದ ಜನರು ಇಂದು ಬೆಳಿಗ್ಗೆ ಅಷ್ಟೊತ್ತಿಗೆ ಗ್ರಾಮವನ್ನೇ ತೊರೆದು, ಮತ್ತೊಮ್ಮೆ ಈ ಗ್ರಾಮದ ಕಡೆ ತಲೆ ಹಾಕಿಯು ಮಲಗೋದಿಲ್ಲ ಎಂದು ಊರನ್ನು ತೊರೆದಿದ್ದಾರೆ.

ಆ ಕೇರಳ ಮೂಲದ ಮಂತ್ರವಾದಿ ಯಾರು ಅನ್ನೋದು ಇನ್ನು ತಿಳಿದುಬಂದಿಲ್ಲ, ಮೌಢ್ಯತೆ ಕುರಿತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದ್ದು,  ಸಧ್ಯ ಇವರೆಲ್ಲಾ ಕುದುರೆಮುಖ,ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಅಂತ ಹೇಳಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com