ವಿಜಯವಾಡ : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದೇವೇಗೌಡರ ಕುಟುಂಬ..

ಮುಖ್ಯಮಂತ್ರಿ ಕುಮಾರಸ್ವಾಮಿ ಸಮೇತರಾಗಿ ದೇವೇಗೌಡರು ತಮ್ಮ ಕುಟುಂಬಸ್ಥರೊಂದಿಗೆ  ದೇವರ ಸನ್ನಿಧಿಗೆ ಬಂದು, ವೆಂಕಟೇಶ್ವರನ ದರ್ಶನ ಪಡೆದರು. ದೇವೇಗೌಡರ ಪತ್ನಿ ಚೆನ್ನಮ್ಮ, ಹಾಗೂ ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಗೌಡರ ಇತರ ಕುಟುಂಬ ಸದಸ್ಯರು ದೇವರ ಕೃಪೆಗೆ ಪಾತ್ರರಾದರು.
ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿಗಳು ದೇವೇಗೌಡ, ಕುಮಾರಸ್ವಾಮಿ ಕುಟುಂಬಕ್ಕೆ ಅದ್ದೂರಿ ಸ್ವಾಗತ ನೀಡಿ,  ತಿಮ್ಮಪ್ಪನ ದರ್ಶನದ ಬಳಿಕ ಗೌಡರ ಕುಟುಂಬಸ್ಥರಿಗೆ ಅರ್ಚರು ಪ್ರಸಾದ, ತೀರ್ಥ ವಿತರಿಸಿದರು. ಇಂದು ಅವರು ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com