ಗೋರಕ್ಷಣೆಗಾಗಿ ಮನೆಮನೆಯಲ್ಲಿ ಮಹಿಳೆಯರು ತಲ್ವಾರ್ ಇಟ್ಟುಕೊಳ್ಳಬೇಕು : VHP ಮುಖಂಡ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ವಿಎಚ್ ಪಿ ಮುಖಂಡ ಮುರಳಿಕೃಷ್ಣ ಹಂಸತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ ಗೋ ರಕ್ಷಣೆಗೋಸ್ಕರ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತೆ. ನಮ್ಮ ಒಂದು ಕೆನ್ನೆಗೆ ಹೊಡೆದರೆ ನಾವು ಹತ್ತು ಬಾರಿ ಹೊಡೆಯುತ್ತೇವೆ. ಗೋಕಳ್ಳತನ ಮುಂದುವರಿದಲ್ಲಿ ಸಂಘಟನೆಯಿಂದಲೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ‘ ಎಂದು ಹೇಳಿದ್ದಾರೆ.

‘ ಗೋ ರಕ್ಷಣೆಗಾಗಿ ಮಹಿಳೆಯರು ಮನೆಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಬೇಕು. ಗೋಕಳ್ಳತನ ಮರುಕಳಿಸುತ್ತಿದ್ದರೆ ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ನಡೆಯಲಿದೆ. ಮಂಗಳೂರಿನ ವಾಮಂಜೂರಲ್ಲಿ ಗೋಕಳ್ಳತನ ವಿರೋಧಿ ಪ್ರತಿಭಟನೆಯಲ್ಲಿ ವಿಎಚ್ ಪಿ ಮುಖಂಡ ಮುರಳಿಕೃಷ್ಣ ಹಂಸತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com