ಉತ್ತರ ಕರ್ನಾಟಕವನ್ನು ಅಲಕ್ಷಿಸಿದರೆ, ಪ್ರತ್ಯೇಕ ರಾಜ್ಯಕ್ಕೆ ಮಠಗಳ ಬೆಂಬಲ : ದಿಂಗಾಲೇಶ್ವರ ಸ್ವಾಮೀಜಿ
‘ ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಕೇಳಿ ಬರ್ತಾ ಇದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದೇ ಇದ್ರೆ ಎಲ್ಲಾ ಮಠಾಧೀಶರು ಪ್ರತ್ಯೇಕ ರಾಜ್ಯದ ಪರ ನಿಲ್ಲಬೇಕಾಗುತ್ತೆ ಎಂದು ದಾವಣಗೆರೆಯಲ್ಲಿ ಬಾಲೇ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಗಳು ಸಿಎಂ ವಿರುದ್ದ ಕಿಡಿಕಾರಿದ್ದಾರೆ.
ದಾವಣಗೆರೆ ನಗರದ ತೊಗಟಿವೀರಪ್ಪ ಕಲ್ಯಾಣ ಮಂಟಪ ದಲ್ಲಿ ಮಾತನಾಡಿದ ಅವರು, ‘ ಸಿಎಂ ಕುಮಾರಸ್ವಾಮಿಯವರು ಚುನಾವಣಾ ಪೂರ್ವದಲ್ಲಿ ಮಾತ್ರ ಆಶ್ವಾಸನೆ ನೀಡಿ, ಸರ್ಕಾರ ರಚನೆಗೊಂಡ ಬಳಿಕ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಬೇಕಾದಾಗ ಮಾತ್ರ ಬಳಕೆ ಮಾಡಿಕೊಂಡು ಈಗ ಕೈಬಿಟ್ಟಿದ್ದಾರೆ ‘ ಎಂದಿದ್ದಾರೆ.
‘ ಉತ್ತರ ಕರ್ನಾಟಕವನ್ನು ಮೈಸೂರು, ತುಮಕೂರು, ಬೆಂಗಳೂರು, ಹಾಸನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಿ. ಕೇವಲ ದಕ್ಷಿಣ ಕರ್ನಾಟಕದ ಭಾಗಗಳು ಮಾತ್ರ ಅಭಿವೃದ್ಧಿಯಾಗಿವೆ. ಆದ್ರೆ ಉತ್ತರ ಕರ್ನಾಟಕ ಸ್ವಲ್ಪವೂ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದ್ದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಎಲ್ಲಾ ಮಠಮಾನ್ಯರು ಬೆಂಬಲ ನೀಡುತ್ತೇವೆ ‘ ಎಂದು ಸಿ ಎಂ ಕುಮಾರಸ್ವಾಮಿಯ ವಿರುದ್ದ ದಿಂಗಾಲೇಶ್ವರ ಶ್ರೀ ಗಳು ಕಿಡಿಕಾರಿದ್ದಾರೆ.
The best Health Product Affiliate Program – Digital Advertising Strategies, how to earn money on Instagram