ಕುಮಾರಸ್ವಾಮಿ ಯಾತಕ್ಕಾಗಿ ಅಷ್ಟೊಂದು ಕಣ್ಣೀರು ಹಾಕ್ತಿದಾರೋ ಗೊತ್ತಿಲ್ಲ : ಶೋಭಾ ಕರಂದ್ಲಾಜೆ

ಮೈಸೂರಿನಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ‘ ಪ್ರತಿ ವರ್ಷದಂತೆ ಈ ವರ್ಷವು ಮೆಟ್ಟಿಲು ಹತ್ತಿ ತಾಯಿಯ ದರ್ಶನ ಪಡೆಯುತ್ತಿದ್ದೇನೆ. ರೈತ ನೆಮ್ಮದಿಯಿಂದ ಬದುಕಲಿ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಜಲಾಶಯಗಳು ತುಂಬಿದೆ. ಜಗಳವಾಡುತ್ತಿದ್ದ ತಮಿಳುನಾಡಿನ ಮೆಟ್ಟೂರು ಜಲಾಶಯವು ತುಂಬಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸುಭಿಕ್ಷವಾಗಿದೆ’ ಎಂದಿದ್ದಾರೆ.

‘ ಮೋದಿಯವರು ನಾಲ್ಕು ವರ್ಷ ಪೂರೈಸಿದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ದೇಶದ ರಕ್ಷಣೆಗೆ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬರುಬೇಕು ‘ ಎಂದು ಹೇಳಿದ್ದಾರೆ. ‘ ಇಂದು ಗ್ರಹಣ ಇದೆ. ಆ ಗ್ರಹಣವನ್ನು ಮುಂದಿಟಟ್ಟುಕೊಂಡು ಕೆಲವರು ಹೆದರಿಸುತ್ತಿದ್ದಾರೆ. ಯಾರು ಹೆದರುವ ಅಗತ್ಯವಿಲ್ಲ ಗ್ರಹಣದಿಂದ ಏನೂ ಆಗೋಲ್ಲ ‘ ಎಂದರು.

‘ ಸಿಎಂ ಕುಮಾರಸ್ವಾಮಿ ಅದ್ಯಾಕೆ ಅಷ್ಟೊಂದು ದುರ್ಬಲರಾಗಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. 37 ಜ‌ನ ಶಾಸಕರಿದ್ರು ಅಚಾನಕ್ ಆಗಿ ಸಿಎಂ ಆಗಿದ್ದಾರೆ.
ಯಾಕಾಗಿ ಅವರು ಕಣ್ಣಿರಿಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಎಲ್ಲರು ಒಳ್ಳೆಯ ಕೆಲಸ ಮಾಡಲಿ ಅಂತ ಅಪೇಕ್ಷೆ ಪಡ್ತಾರೆ. ಒಳ್ಳೆ ಕೆಲಸ ಮಾಡಲಿಲ್ಲ ಅಂದ್ರು ಚಾಮುಂಡೇಶ್ವರಿ ಅವರನ್ನ ನೋಡಿಕೊಳ್ಳುತ್ತಾಳೆ ‘ ಎಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಂಸದೆ ಶೋಭ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com