ಪ್ರಧಾನಿ ಮೋದಿಯ ಆಟೋಗ್ರಾಫ್ ಆಕೆಯ ಜೀವನವನ್ನೇ ಬದಲಿಸಿದ್ದು ಹೇಗೆ ಗೊತ್ತಾ…!

ಬಂಕುರಾ : ಪ್ರಧಾನಿ ಮೋದಿ ಯುವತಿಯೊಬ್ಬಳಿಗೆ ನೀಡಿದ ಆಟೋಗ್ರಾಫ್ ಆಕೆಯ  ಜೀವನವನ್ನೇ ಬದಲಿಸಿಬಿಟ್ಟಿದೆ. ಹೌದು ಮೋದಿಯಿಂದ ಹಸ್ತಾಕ್ಷರ ಪಡೆದ ಯುವತಿ ಅವರ ಗ್ರಾಮದಲ್ಲಿ ಸೆಲೆಬ್ರೆಟಿಯಾದ್ದಾಳೆ.

ಪಶ್ಚಿಮ ಬಂಗಾಳದ ನಿವಾಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಬದುಕುಕನ್ನು ಮೋದಿಯ ಒಂದು ಆಟೋಗ್ರಾಫ್ ಬದಲಿಸುತ್ತದೆ ಎಂದರೆ ಯಾರು ನಂಬುವುದಿದ್ದ ಆದರೆ ಅದು ನಿಜವಾದ ಸಂಗತಿ. ಆಕೆಯ ಗ್ರಾಮದಲ್ಲಿ ಅವಳು ಸೆಲೆಬ್ರೆಟಿಯಾಗಿದ್ದು,  ಉತ್ತಮೋತ್ತಮ ವಿವಾಹ ಪ್ರಸ್ತಾವಗಳು ಸಹ ಆಕೆಯನ್ನು ಹುಡುಕಿಕೊಂಡು ಬರುತ್ತಿದ್ದೆ,

ಜುಲೈ 16 ರಂದು ವಿದ್ಯಾರ್ಥಿನಿ ರೀಟಾ ಹಾಗೂ ಕುಟುಂಬಸ್ಥರು ಪ್ರಧಾನಿ ಮೋದಿ ಅವರ ಭಾಷಣ ಕೇಳಲು ಮಿಡ್ನಾಪುರ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಚಪ್ಪರ ಕುಸಿದು ರೀಟಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಪ್ರಧಾನಿ ಆಸ್ಪತ್ರೆತಗೆ ಭೇಟಿ ನೀಡಿದ ಸಂದರ್ಭದಲ್ಲಿ ರೀಟಾ ಅವರ ಸಂತಸ ಮುಗಿಲು ಮುಟ್ಟಿತ್ತು. ಈ ವೇಳೆ ಪ್ರಧಾನಿಯವರ ಆಟೋಗ್ರಾಫ್ ಪಡೆದಿದ್ದರು. ಈಗ ಅದೇ ಆಟೋಗ್ರಾಫ್ ರೀಟಾಳನ್ನು  ಸೆಲೆಬ್ರೆಟಿಯನ್ನಾಗಿ ಮಾಡಿದೆ.

ಪ್ರಧಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಟೋಗ್ರಾಫ್ ನೀಡುವಂತೆ ಅವರ ಬಳಿ ಮನವಿ ಮಾಡಿದ್ದೆ. ಆಟೋಗ್ರಾಫ್ ಹಾಕಲು ಅವರು ಹಿಂದೆ-ಮುಂದೆ ನೋಡಿದರು. ಆದರೆ, ಅವರನ್ನು ಒತ್ತಾಯಿಸಿ ಆಟೋಗ್ರಾಫ್ ಪಡೆದೆ. ಆಗ ಅವರು ‘ರೀಟಾ ತುಮ್ ಸುಖಿ ರಹೋ’ ಎಂದು ಬರೆದು ಆಟೋಗ್ರಾಫ್ ಹಾಕಿ ಕೊಟ್ಟರು. ಆಗ ನನಗಾದ ಸಂತಸ ಅಷ್ಟಿಷ್ಟಲ್ಲ’ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.

ಖುದ್ದು ಪ್ರಧಾನಿಯವರೇ ನೀಡಿದ ಆಟೋಗ್ರಾಫ್ ನೋಡಲು ಸಾಕಷ್ಟು ಜನ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಪುತ್ರಿ ರೀಟಾಳಿಗೆ ಮದುವೆ ಪ್ರಸ್ತಾಪಗಳು ಸಹ ಹುಡುಕಿಕೊಂಡು ಬರುತ್ತಿವೆ’ ಎಂದು ಯುವತಿಯ ತಾಯಿ ಸಂಧ್ಯಾ ಸಂತಸ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.