ತಮಿಳುನಾಡು : ಅನಾರೋಗ್ಯದಿಂದ ಬಳಲುತ್ತಿರುವ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ…!

ತಮಿಳುನಾಡು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಬೆಂಬಲಿಗರು ಮತ್ತು ಕಾರ್ಯಕರ್ತರು ನಿವಾಸಕ್ಕೆ ಜಮಾಯಿಸಿದ್ದಾರೆ.

ಸುಮಾರು ದಿನಗಳಿಂದ ಕರುಣಾನಿಧಿಯವರು ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು , ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ನಿಗಾ ವಹಿಸಿದ್ದಾರೆ,  ಮೂತ್ರ ನಾಳದ ಸೊಂಕಿನಿಂದಲೂ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದ್ದು. ಇನ್ನು ಕರುಣಾನಿಧಿ ಅವರ ನಿವಾಸಕ್ಕೆ ಬೆಂಬಲಿಗರು ಶಾಸಕರು ಗಣ್ಯಾತೀಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನ ಜನರ ಸಂಖ್ಯೆ ಹೆಚ್ಚಾಗಿದ್ದು, ಕರುಣಾನಿಧಿ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಇನ್ನ ಕರುಣಾನಿಧಿ ಆರೋಗ್ಯ ಬೇಗ ಚೇತರಿಸಿಕೊಳ್ಳಲ್ಲಿ ಎಂದು ಪ್ರಧಾನಿ ಮೋದಿ, ರಾಮನಾಥ್ ಕೋವಿಂದ್ ಇನ್ನಿತರ ರಾಜಕೀಯ ನಾಯಕರು ಟ್ವೀಟ್ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com