ಉಡುಪಿ : ಶಿರ್ವ ಮೂಲದ ನರ್ಸ್ ಸೌದಿಯಲ್ಲಿ ನಿಗೂಢ ಸಾವು : ಜೆಸಿಂತಾ ಪ್ರಕರಣದೊಂದಿಗೆ ಸಾಮ್ಯತೆ..

ಉಡುಪಿ : ಶಿರ್ವ ಮೂಲದ ನರ್ಸ್ ಸೌದಿಯಲ್ಲಿ ನಿಗೂಢ ಸಾವನ್ನಪ್ಪಿದ್ದಾರೆ. ಸೌದಿಯ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಆರು ವರ್ಷಗಳಿಂದ ನರ್ಸ್ ಆಗಿದ್ದ ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ಸ್ನಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಜುಲೈ 19 ರಂದು ಪತಿ ಅಶ್ವಿನ್ ಮಥಾಯಿಸ್ ರೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ಅದಾಗಿ ಎರಡು ದಿನಗಳ ಬಳಿಕ ಸಹೋದ್ಯೋಗಿ ಮೂಲಕ ಸಾವನ್ನಪ್ಪಿರುವ ಮಾಹಿತಿ ಬಂದಿತ್ತು. ಆದರೆ ಸಾವು ಹೇಗೆ ಸಂಭವಿಸಿತು , ಎಲ್ಲಿ ಸಂಭವಿಸಿತು ಎಂಬ ನಿಖರ ಮಾಹಿತಿ ಊರವರಿಗೂ ತಿಳಿಸಿಲ್ಲ.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಝಾ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಈ ಸಂಬಂಧ ವಿದೇಶಾಂಗ ಸಚಿವೆಯನ್ನು ಸಂಪರ್ಕಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಇದೇ ಭಾಗದ ನರ್ಸ್ ಜೆಸಿಂತಾ ಕೂಡ ನಿಗೂಢ ಸಾವನ್ನಪ್ಪಿದ್ದರು. ಜೆಸಿಂತಾ ನಿಗೂಢ ಸಾವಿನೊಂದಿಗೆ ಹೆಝಲ್ ಪ್ರಕರಣ ಹೋಲುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com