ಧೋನಿ ಭಾರತದ ಅತ್ಯಂತ ‘ಜನಪ್ರಿಯ’ ಕ್ರೀಡಾಪಟು : ಸಚಿನ್, ಕೊಹ್ಲಿಯನ್ನು ಹಿಂದಿಕ್ಕಿದ MSD

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು (Most Admired Sportsperson) ಎನಿಸಿದ್ದಾರೆ. ‘ಯುಗೋ’ (YouGov) ಸಂಸ್ಥೆ ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರನ್ನು ಹಿಂದಿಕ್ಕಿ, ಧೋನಿ ಭಾರತದ ಅತ್ಯಂತ ಮೆಚ್ಚಿನ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

Image result for sachin dhoni kohli

ಸಮೀಕ್ಷೆಯ ನಂತರ ಬಂದ ಫಲಿತಾಂಶದ ‘ಅಡ್ಮಿರೇಷನ್ ಸ್ಕೋರ್’ ನಲ್ಲಿ ಧೋನಿ 7.7 ಸಚಿನ್ ತೆಂಡೂಲ್ಕರ್ 6.8 ಹಾಗೂ ವಿರಾಟ್ ಕೊಹ್ಲಿ 4.8 ಪಾಯಿಂಟ್ ಗಳನ್ನು ಗಳಿಸಿದ್ದರು. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಧೋನಿ, ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ, ನಾಯಕತ್ವ ತ್ಯಜಿಸಿದರೂ ಸಹ ಅಬಿಮಾನಿಗಳ ಪಾಲಿಗೆ ಈಗಲೂ ಫೇವರೆಟ್ ಆಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com