ಗ್ರಹಣ ಪ್ರಭಾವ ಹಾಗೂ ತಲಕಾವೇರಿ ಭೇಟಿಯಿಂದ ಸಿಎಂ ಕುರ್ಚಿಗೆ ಕಂಟಕ….?

 

ಇಂದು ಜರುಗುವ ದೀರ್ಘಾವಧಿ ಕೇತುಗೃಸ್ತ ಚಂದ್ರ ಗ್ರಹಣದ ಪ್ರಭಾವದಿಂದ ರಾಜ್ಯದ ಸಿ.ಎಂ ಕುಮಾರಸ್ವಾಮಿ ಅವರ ಕುರ್ಚಿ ಅಲುಗಾಡಲಿದೆ ಎಂಬ ಕೊಡಗಿನ ಖ್ಯಾತ ಜ್ಯೋತಿಷಿ ಹಾಗೂ ಮಡಿಕೇರಿಯ ವಿಜಯ ವಿನಾಯಕ ದೇವಾಲಯದ ಪ್ರಮುಖ ಅರ್ಚಕರಾದ ಕೃಷ್ಣ ಉಪಾದ್ಯ ಅವರು ಭವಿಷ್ಯ ನುಡಿದಿದ್ದಾರೆ.

ಗ್ರಹಣದಿಂದ ಪ್ರಕೃತಿಯಲ್ಲಿ ಕೆಲವೊಂದು ಬದಲಾವಣೆಗಳು ನಡೆಯುತ್ತವೆ. ಹಾಗೇಯೇ ಗ್ರಹಣ ಹಾಗೂ ಕೊಡಗಿನ ಭಾಗಮಂಡಲವನ್ನ ದಾಟಿ ತಲಕಾವೇರಿಗೆ ಕುಮಾರಸ್ವಾಮಿ ಹೋಗಿರುವ ಹಿನ್ನಲೆ ಅವರ ಆರೋಗ್ಯದಲ್ಲಿ ಸಮಸ್ಯೆ ಅಥವಾ ಸಿಎಂ ಸ್ಥಾನಕ್ಕೆ ಕಂಟಕ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದರೆ. ಭಾಗಮಂಡಲದ ತ್ರಿವೇಣಿ ಸಂಗಮ ಪಿತೃಗಳಿಗೆ ಪಿಂಡಪ್ರಧಾನ ಮಾಡುವ ಸ್ಥಳವಾಗಿದ್ದು ನಾಡದೊರೆಯಾದವರು ಭಾಗಮಂಡಲ ದಾಟಿ ತಲಕಾವೇರಿಗೆ ಹೋಗಿದ್ದು ಒಳ್ಳೆಯದಲ್ಲ ಅಂತ ಕೃಷ್ಣ ಉಪಾದ್ಯ ಹೇಳಿದ್ದಾರೆ.

ಇನ್ನು ಗ್ರಹಣ ಅನ್ನೋದು ಒಂದು ಪ್ರಾಕೃತಿಕ ಕ್ರಿಯೆಯಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ. ಗ್ರಹಣದ ಸಮಯ ದೇವರ ಶ್ಲೋಕ, ಮಂತ್ರಗಳನ್ನ ಪಠಿಸುವುದು ಅಥವಾ ಗ್ರಹಣದ ಮರುದಿನ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಮಾಡುವುದು ಮತ್ತು ದಾನ ಧರ್ಮಗಳನ್ನ ಮಾಡುವುದರಿಂದ ಒಳ್ಳೆಯದಾಗುತ್ತೆ ಎಂದು ತಿಳಿಸಿದ್ದಾರೆ.

 

Leave a Reply

Your email address will not be published.