ತಪ್ಪಿದ ಕಾರು – ಬಸ್ ಅಪಘಾತ : ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾದ ಸೊಗಡು ಶಿವಣ್ಣ..

ತುಮಕೂರು : ಮಾಜಿ ಸಚಿವ ಸೊಗಡು ಶಿವಣ್ಣ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರು ನಗರದ ಸ್ವಾತಂತ್ರ್ಯ ಚೌಕದಲ್ಲಿ ನಡೆದಿದೆ. ಸೊಗಡು ಶಿವಣ್ಣ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಸ್ವಲ್ಪದರಲ್ಲೇ ಅಪಘಾತ ತಪ್ಪಿದೆ. ಖಾಸಗಿ ಬಸ್ಸೊಂದು ಸೊಗಡು ಶಿವಣ್ಣ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವಂತೆ ಬಂದಿದೆ.

ಮದುಗಿರಿ ಕಡೆಯಿಂದ ಬಂದ ka 25 c 4083 ನಂಬರಿನ ಖಾಸಗಿ ಬಸ್ ಮತ್ತು ನಗರದಿಂದ ಮನೆಗೆ ತೆರಳುತ್ತಿದ್ದ ಸೊಗಡು ಶಿವಣ್ಣ ಅವರ ಕಾರಿನ ನಡುವೆ ಅಪಘಾತ ತಪ್ಪಿದೆ. ಕ್ಷಣಾರ್ಧದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಖಾಸಗಿ ಬಸ್ ಚಾಲಕ‌ನ ಅತಿವೇಗ, ಅಜಾಗರೂಕತೆ ಕಾರಣ ಎನ್ನಲಾಗಿದ್ದು, ಸೊಗಡು ಶಿವಣ್ಣ ಚಾಲಕನ ವಿರುದ್ದ ದೂರು ನೀಡಿದ್ದಾರೆ. ತುಮಕೂರು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.