ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ನನ್ನನ್ನು ತಬ್ಬಿಕೊಳ್ಳಲಿ : ಯುಪಿ ಸಿಎಂ ಆದಿತ್ಯನಾಥ್

ನವದೆಹಲಿ : ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ನನ್ನನ್ನು ತಬ್ಬಿಕೊಳ್ಳಿಲಿ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸವಾಲ್ ಹಾಕಿದ್ದಾರೆ.

ಮೊನ್ನೆಯಷ್ಟೇ ನಡೆದ  ಪಾರ್ಲಿಮೆಂಟ್ ನಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ತಬ್ಬಿಕೊಂಡು ಎಲ್ಲಾರ ಬಾಯಿಗೆ ತುತ್ತಾಗಿದ್ದರು.  ಇದಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಯುಪಿ ಸಿಎಂ ಯೋಗಿ  ಆದಿತ್ಯನಾಥ್, ರಾಹುಲ್ ಮೋದಿಯನ್ನು ತಬ್ಬಿಕೊಂಡು ಸ್ಟಂಟ್​​ ಮಾಡಿದ ರೀತಿ ಧೈರ್ಯವಿದ್ದರೆ ನನ್ನನ್ನು ತಬ್ಬಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯನ್ನು ತಬ್ಬಿಕೊಳ್ಳುವುದಕ್ಕೂ ಮೊದಲು ರಾಹುಲ್​ ಗಾಂಧಿ ಕಡಿಮೆ ಅಂದ್ರೂ 10 ಬಾರಿ ಪ್ರಾಕ್ಟೀಸ್​​ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್​ ಗಾಂಧಿ ಸ್ವಲ್ಪವಾದ್ರೂ ತಿಳುವಳಿಕೆ ಇರುವಂತಹ ವ್ಯಕ್ತಿಯಾಗಿದ್ರೆ ಪಾರ್ಲಿಮೆಂಟ್​ನಲ್ಲಿ ಆ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಈ ರೀತಿಯ ರಾಜಕೀಯ ಸ್ಟಂಟ್​ಗಳನ್ನು ನಾನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಯೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಪಾರ್ಲಿಮೆಂಟ್​​ನಲ್ಲಿ ಮೋದಿಯನ್ನು ತಬ್ಬಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್​ ಗಾಂಧಿ, ಇತ್ತೀಚೆಗೆ ನಾನು ಬಿಜೆಪಿ ಸಂಸದರ ಮುಂದೆ ಹೋದಾಗಲೆಲ್ಲಾ ನಾನು ಅವರನ್ನು ತಬ್ಬಿಕೊಳ್ತೇನೆ ಅಂತಾ ಯೋಚಿಸಿ ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

 

Leave a Reply

Your email address will not be published.