ರಾಜಕೀಯದ ಮೇಲೆ ಚಂದ್ರ ಗ್ರಹಣದ ಎಫೆಕ್ಟ್ – CM ಆಗ್ತಾರಾ ರೇವಣ್ಣ.? : ಕೋಡಿ ಶ್ರೀ ಹೇಳಿದ್ದೇನು.?

ಚಂದ್ರ ಗ್ರಹಣದ ಪರಿಣಾಮದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಲಿದ್ದು ಪ್ರಸ್ತುತ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಎಚ್.ಡಿ. ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದ್ದಾರೆ.

ತಾಳೆಗರಿ ನೋಡಿ ಭವಿಷ್ಯ ಹೇಳುವ ಶ್ರೀಗಳು ಖಾಸಗಿ ವಾಹಿನಿಯೊಂದಿಗೆ ಹಾಸನದಲ್ಲಿ ಮಾತನಾಡಿ, ‘ಅರಸನ ಆಯಸ್ಸು ಉಸಿರಲ್ಲಿ ನಿಂತೀತು ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು’ ಎಂದು ಅವರು ಒಗಟಾಗಿ ತಿಳಿಸಿದ್ದಾರೆ.

‘ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈ ಭವಿಷ್ಯ ಅರ್ಥ ಮೂಡಿಸುತ್ತದೆ. ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ’ ಎಂದೂ ಭವಿಷ್ಯ ನುಡಿದಿದ್ದಾರೆ….

Leave a Reply

Your email address will not be published.

Social Media Auto Publish Powered By : XYZScripts.com