ಕಾರವಾರ : ಓಮ್ನಿ-ಲಾರಿ ನಡುವೆ ಭೀಕರ ಡಿಕ್ಕಿ : ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

ಕಾರವಾರ : ಮಾರುತಿ ಓಮಿನಿ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಿರವತ್ತಿ ಗ್ರಾಮದ ಜಯಂತಿ ನಗರದಲ್ಲಿ ಬುಧವಾರ ನಡೆದಿದೆ.ಶಿರಸಿಯ ದೇವನಳ್ಳಿ ಗ್ರಾಮದ ನಿವಾಸಿಗಳಾದ ದೇವಿ ಜಾಯು ಮರಾಠಿ (50), ಸುಮನಾ ಮಂಜುನಾಥ ಮರಾಠಿ (19) ಮೃತಪಟ್ಟವರು. ಓಮಿನಿಯಲ್ಲಿದ್ದ ಮಂಜುನಾಥ ಮರಾಠಿ (26), ಗೋವಿಂದ ಮರಾಠಿ (50), ಓಮಿನಿ ಚಾಲಕ ನಾಗರಾಜ ಬಡಗಿ (30) ಇವರಿಗೆ ತೀವ್ರ ಗಾಯವಾಗಿದೆ.

ಇವರೆಲ್ಲ ಕಿರವತ್ತಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಮಾರುತಿ ಓಮಿನಿಯಲ್ಲಿ ತೆರಳಿದ್ದ ಇವರು,ಯಲ್ಲಾಪುರ ಮಾರ್ಗವಾಗಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಯಲ್ಲಾಪುರ ದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದೆ.ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಡಾ. ಮಂಜುನಾಥ ನಾಯಕ, ಪೊಲೀಸ್ ಉಪ ನಿರೀಕ್ಷಕ ಎಂ. ಎಸ್. ಹೂಗಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com