ಗೌರಿ ಹತ್ಯೆ ಹಿಂದೆ ಅನೇಕ ಹಿಂದೂ ಸಂಘಟನೆಗಳ ಕೈವಾಡವಿದೆ : ಬಸವರಾಜ್ ಸೂಳಿಭಾವಿ

ಗದಗ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿಂದೆ ಆರ್.ಎಸ್.ಎಸ್ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಎಮ್.ಎಮ್ ಕಲಬುರ್ಗಿ, ಗೌರಿಲಂಕೇಶ್, ದಾಬೋಲ್ಕರ್, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ಸಂಚಾಲಕ ಬಸವರಾಜ್ ಸೂಳಿಭಾವಿ ಗಂಭೀರ ಆರೋಪ ಮಾಡಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಐಟಿ ವಿಚಾರಣೆಗಾಗಿ ಬಂಧಿಸಿರೋ 10 ಜನ ಹಿಂದೂ ಸಂಘಟನೆಗಳ ಸದಸ್ಯರಿದ್ದಾರೆ. ಸಂಘಟನೆಗಳ ಹೆಸರು ಬೇರೆಯಾದ್ರೂ ಅದರ ಮಾತೃಸಂಸ್ಥೆ ಆರ್.ಎಸ್.ಎಸ್ ಒಂದೆ ಎಂದು ತಿಳಿಸಿದ್ದರು.

ಆರ್.ಎಸ್.ಎಸ್ ದೇಶದಲ್ಲಿ ಹಿಂಸೆ ನಡೆಸುವ ಸಂಘಟನೆಯಾಗಿದೆ. ವಿಧ್ವಂಸಕ ಕೃತ್ಯಗಳ ನಂತರ, ಮಾಡಿದ ವ್ಯಕ್ತಿ ನಮ್ಮವನಲ್ಲ ಎಂದು ನುಣುಚಿಕೊಳ್ಳುತ್ತೆ. ನಂತರ ಬೇರೆ ಬೇರೆ ಧರ್ಮಗಳ ಪ್ರತಿನಿಧಿಗಳನ್ನು ಹತ್ಯೆ ಮಾಡಲು ಮುಂದಾಗುವುದು ಯಾವ ನ್ಯಾಯ.? ಗೋ ರಕ್ಷಣೆ ಹೆಸರಲ್ಲಿ ಸಾಮೂಹಿಕ ಹಿಂಸೆ ನಡೆಸ್ತಿದ್ದಾರೆ. ಇದು ನಿಲ್ಲಬೇಕು ಎಂದು ಬಂಡಾಯ ಸಾಹಿತಿ ಬಸವರಾಜ್ ಸೂಳಿ ಹಿಂದೂ ಸಂಘಟನೆಗಳ ವಿರುದ್ಧ ಕಿಡಿಕಾರಿದರು.

 

Leave a Reply

Your email address will not be published.