ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ರಾಮಾಚಾರಿ : ಅಪ್ಪ ಆಗ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್..

ಹೌದು…, ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾಗಿ ಇದೇ ಡಿಸೆಂಬರ್​ಗೆ ಎರಡು ವಸಂತ ಕಳೆಯುತ್ತೆ. ಮದುವೆಯಾಗಿ 2 ವರ್ಷವಾದ್ರೂ ಯಶ್​ ತಂದೆ ಆಗೋದು ಯಾವಾಗ ಎನ್ನುವ ಕೊರಗು ಅವರ ಅಭಿಮಾನಿಗಳಲ್ಲಿತ್ತು. ಅಲ್ಲದೇ ಯಶ್​ ಅವರ ತಾಯಿ ಕೂಡ ನಾನು ಅಜ್ಜಿ ಆಗೋದು ಯಾವಾಗ ಎಂದು ಕೆಲ ದಿನಗಳ ಹಿಂದೆಯಷ್ಟೇ ನೇರವಾಗಿ ತಮ್ಮ ಮಗನನ್ನು ಕೇಳಿಕೊಂಡಿದ್ದರು. ಇದೀಗ ತಮ್ಮ ಮನೆಯವರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಯಶ್​ ದಂಪತಿ ನಾವು ತಂದೆ ತಾಯಿಯಾಗುತ್ತಿದೇವೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಯಶ್​​, ತಾವು ತಂದೆಯಾಗಿ ಪ್ರಮೋಷನ್ ಪಡೆಯುತ್ತಿರುವ ವಿಚಾರವನ್ನು ಇಂದು ತಮ್ಮ ಫೇಸ್​ಬುಕ್​ ಹಾಗೂ ಟ್ವೀಟರ್ ನಲ್ಲಿ ಬರೆದುಕೊಂಡಿದ್ದು. ರಾಧಿಕಾ ಕೂಡ ಇನ್ನು ಮುಂದೆ ನಾವು ಮೂವರು ಎನ್ನುವ ಮೂಲಕ ತಾವು ಗರ್ಭಿಣಿಯಾಗಿರುವ ಸಂತಸದ ಸಂಗತಿಯನ್ನು ಫೇಸ್ ಬುಕ್ ನಲ್ಲಿ ಮೂಲಕ ತಿಳಿಸಿದ್ದಾರೆ.

ಇನ್ನ ಯಶ್ ಹಾಗೂ ರಾಧಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com