ಮೈಸೂರು : ವೈನ್ ಶಾಪ್ ಬೇಡವೆಂದು ಮಹಿಳೆಯರ ಆಕ್ರೋಶ : ಬಾರ್ ಬೇಕೆಂದು DSS ಹೋರಾಟ..!

ಮೈಸೂರು :  ವೈನ್ ಶಾಪ್ ಬೇಕು – ಬೇಡ ಎಂಬ ವಿಚಾರಕ್ಕೆ ಸಂಬಂಧ ಪಟ್ಟಂತೆ ಪರ- ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿ ಹೀರಳ್ಳಿ ಗ್ರಾಮದಲ್ಲಿ ನಡೆದಿದೆ.

ವೈನ್ ಶಾಪ್ ಬೇಡ ಎಂದು ಗ್ರಾಮಸ್ಥರ (ಮಹಿಳೆಯರು ) ಪ್ರತಿಭಟನೆ ನಡೆಸುತ್ತಿದ್ದಾರೆ. ವೈನ್ ಶಾಪ್‌ ಬೇಕು ಅಂತ ಡಿಎಸ್ ಎಸ್ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದಾರೆ.  ಗ್ರಾಮದ ಹೊರವಲಯದಲ್ಲಿ ವೈನ್ ಶಾಪ್ ತೆರಯಲು ಸರ್ಕಾರ ಅನುಮತಿ ನೀಡಿದಿದ್ದರು,  ಹೀರಳ್ಳಿ ಗ್ರಾಮದ ಹೊರವಲಯದಲ್ಲಿ ಒಂದು ಬಾರ್ ತೆರಯಲು ಅಬ್ಕಾರಿ ಇಲಾಖೆ ಅನುಮತಿ ನೀಡಿದೆ. ಹೀಗಾಗಿ  ನಮ್ಮ ಗ್ರಾಮದಲ್ಲಿ ಬಾರ್ ಬೇಡ ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ನಮ್ಮ ಮನೆಯ ಗಂಡಂದಿರು ಮದ್ಯ ಸೇವಿಸಿ ಬರ್ತಾರೆ,  ನಮ್ಮ ಮನೆಯಲ್ಲಿ ಎಲ್ಲರ ಜೊತೆ ಜಗಳ ಮಾಡುತ್ತಾರೆ, ಈ ಬಾರ್ ನಮ್ಮ ಗ್ರಾಮದಲ್ಲಿ ತೆರಯುವುದು ಬೇಡ ಎಂದು ಬಾರ್ ಮಾಲೀಕರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಹಳ್ಳಿಯಲ್ಲಿ ಬಾರ್ ಬೇಕು ಎಂದು ಪ್ರತಿಯಾಗಿ ಎಚ್.ಡಿ. ಕೋಟೆ ತಾಲ್ಲೂಕು ಕಚೇರಿ ಮುಂಬದಿಯಲ್ಲಿ ಡಿ ಎಸ್ಎಸ್ ಸಂಘಟನೆಯಿಂದ ವೈಶಾಪ್ ಪರವಾಗಿ ಒಂದು ಗುಂಪು ಪ್ರತಿಭಟನೆ ನಡೆಸುತ್ತಿದ್ದು. ವೈನ್ ಶಾಪ್ ತೆರೆಯಲು ಅನುಮತಿ ಕೊಡುತ್ತಾರೋ ಇಲ್ಲವೂ ಕಾದೂ ನೋಡಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com