‘ಶಾಲೆಗೆ ಹೋಗಲು ಹೆಲಿಕಾಪ್ಟರ್ ಇಲ್ಲವೆ ಬೋಟ್ ಕಳಿಸಿ’ : ಸಿಎಂ ಯೋಗಿಗೆ ಪತ್ರ ಬರೆದ ವಿದ್ಯಾರ್ಥಿನಿ

ಉತ್ತರ ಪ್ರದೇಶ : ಶಾಲೆಗೆ  ತೆರಳಲು ಹೆಲಿಕ್ಯಾಪ್ಟರ್  ಅಥವಾ  ಬೋಟಿನ  ವ್ಯವಸ್ಥೆ  ಮಾಡಿಕೊಡಿ ಎಂದು 8 ನೇ ತರಗರಿ ವಿದ್ಯಾರ್ಥಿನಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾಳೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮರ್ಹಾಲ್ ಗ್ರಾಮದ ಹುಡುಗಿ ಭಾವನ ಸಿಎಂ ಆದಿತ್ಯನಾಥ್ ಗೆ ನಮ್ಮ ಗ್ರಾಮದ ಸಮಸ್ಯೆ ಹಾಗೂ ಮಕ್ಕಳು ಶಾಲೆಗೆ ಹೋಗಲು ಸರಿಯಾದ ರಸ್ತೆ ಸೌಕರ್ಯವಿಲ್ಲ, ಅಲ್ಲದೇ ಮಳೆಗಾಲದಲ್ಲಿ  ಶಾಲೆಗೆ ಹೋಗುವುದು ಸಾಕಷ್ಟು ಕಷ್ಟಕರವಾದ ಸಂಗತಿ. ಸರ್ಕಾರ ಈ ಎಲ್ಲಾ ವಿಚಾರ ತಿಳಿದಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಭಾವನ ಪತ್ರಕ್ಕೆ ಎಲ್ಲಾರೂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನ  ಭಾವನ ಪತ್ರದಲ್ಲಿ,  ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೊಳಿಸಿದೆ. ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರವನ್ನೂ ನೀಡುತ್ತಿದ್ದಾರೆ. ಆದರೆ ಮಥುರಾದ ಅನೇಕ ಭಾಗಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದೇ ಕಷ್ಟವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.

ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶ ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಮಥುರಾ ಸುತ್ತಮುತ್ತವೂ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಗ್ರಾಮದಲ್ಲಿ ಸರಿಯಾದ ರಸ್ತೆಯಾಗುವವರೆಗೆ, ಶಾಲೆಗೆ ಹೋಗಲು ಅಗತ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದು, ಸಾಧ್ಯವಾಗುದಾದರೆ, ಶಾಲೆಗೆ ತೆರಳಲು ಹೆಲಿಕಾಪ್ಟರ್‌ನ ವ್ಯವಸ್ಥೆ ಅಥವಾ ಬೋಟಿನ ವ್ಯವಸ್ಥೆ ಮಾಡುವಂತೆ ಕೊರಿಕೊಂಡಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com