‘ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲುವ ಫೇವರಿಟ್’ : ಮಾಜಿ ಇಂಗ್ಲೆಂಡ್ ಕ್ರಿಕೆಟರ್ ಹೀಗೆ ಹೇಳಿದ್ದೇಕೆ..?

ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವೆ ಆಗಸ್ಟ್ 1 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಟಿ-20 ಸರಣಿಯನ್ನು ಭಾರತ ಗೆದ್ದರೆ, ಏಕದಿನ ಸರಣಿ ಗೆದ್ದು ಇಂಗ್ಲೆಂಡ್ ತಿರುಗೇಟು ನೀಡಿದೆ. ಇದೀಗ ಟೆಸ್ಟ್ ಸರಣಿ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕೆರಳಿಸಿದೆ. ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲುವ ಫೇವರಿಟ್ ತಂಡವಾಗಿದೆ ಎಂದು ಮಾಜಿ ಇಂಗ್ಲೆಂಡ್ ಕ್ರಿಕೆಟರ್ ಆ್ಯಲನ್ ಲ್ಯಾಂಬ್ ಅಭಿಪ್ರಾಯ ಪಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಆ್ಯಲನ್ ಲ್ಯಾಂಬ್ ‘ ನನ್ನ ಪ್ರಕಾರ ಟೆಸ್ಟ್ ಸರಣಿಯನ್ನು ಭಾರತ ಗೆಲ್ಲುವ ಫೇವರಿಟ್ ತಂಡವಾಗಿ ಆರಂಭಿಸಲಿದೆ. ಸರಣಿ ಮುಂದುವರೆದಂತೆ ಪರಿಸ್ಥಿತಿಗಳು ಭಾರತಕ್ಕೆ ಅನುಕೂಲಕರವಾಗಲಿವೆ. ಕಳೆದ ಕೆಲವು ವಾರಗಳಿಂದ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದ ಪಿಚ್ ಗಳು ಒಣಗಿ ಭಾರತೀಯ ಸ್ಪಿನ್ನರ್ ಗಳಿಗೆ ನೆರವು ಸಿಗು ಸಾಧ್ಯತೆಯಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.