ಶಿರೂರು ಶ್ರೀ ಸಾವಿಗೆ ಸ್ಫೋಟಕ ತಿರುವು : ಪೋಲೀಸರ ವಶಕ್ಕೆ ರಮ್ಯ ಶೆಟ್ಟಿ ಸ್ನೇಹಿತ..

ಉಡುಪಿ : ಶೀರೂರು ಶ್ರೀ ಅನುಮಾನಾಸ್ಪದ ಸಾವಿಗೆ ಸ್ಪೋಟಕ ತಿರುವು ಸಿಕ್ಕಿದ್ದು, ಶೀರೂರು ಶ್ರೀ ಆಪ್ತೆ ರಮ್ಯ ಶೆಟ್ಟಿ ಸ್ನೇಹಿತ ಇಕ್ಬಾಲ್ ಉಡುಪಿ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾನೆ. ರಮ್ಯಾ ಶೆಟ್ಟಿ ಸ್ನೇಹಿತ ಇಕ್ಬಾಲ್ ಶೇಖ್ ಮನ್ಸೂರ್ ನಿನ್ನೆ ತನ್ನ ಕಾರಿನಲ್ಲಿ ರಮ್ಯಾ ಶೆಟ್ಟಿ ಪರಾರಿಯಾಗಲು ಸಹಾಯ ಮಾಡಿದ್ದ.

ಮೂಲತಃ ಉಡುಪಿಯ ಕಾಪು ನಿವಾಸಿಯಾಗಿರುವ ಇಕ್ಬಾಲ್ ಶೀರೂರು ಶ್ರೀ ಆಸ್ಪತ್ರೆ ದಾಖಲಾದ ದಿನ ಮೂಲಮಠಕ್ಕೆ‌ ಭೇಟಿ ನೀಡಿದ್ದ. ಸಿಸಿಟಿವಿ ಡಿವಿಆರ್ ರಾತ್ರಿ ವೇಳೆ ಕದ್ದೊಯ್ದಿದ್ದ ಇಕ್ಬಾಲ್, ಮೂಲಮಠದಿಂದ 2 ಕಿಲೋ‌ಮೀಟರ್ ಮುಂದೆ ಸಾಗಿ ಸೇತುವೆ ಕೆಳಗಡೆ ಎಸೆದಿದ್ದ.

ಸ್ವರ್ಣ ನದಿಗೆ ಎಸೆದಿದ್ದರಿಂದ ನಾಪತ್ತೆಯಾಗಿದ್ದ ಡಿವಿಆರ್ ಅನ್ನು ಇಂದು ಬೆಳಿಗ್ಗೆ ಮುಳುಗು ತಜ್ಞರ ಸಹಾಯ ಪಡೆದು ಪೋಲೀಸರು ಹೊರತೆಗೆದಿದ್ದರು. ದುಬೈಯಲ್ಲಿ ಕೆಲಸದಲ್ಲಿದ್ದ ಇಕ್ಬಾಲ್ ಮುಂಬೈ ಸಂಪರ್ಕದಿಂದಾಗಿ ರಮ್ಯಾ ಜೊತೆ ಸಂಪರ್ಕ ಹೊಂದಿದ್ದ. ನಿನ್ನೆ ತನ್ನ‌ ಕುಟುಂಬಿಕರ ಜೊತೆ ಸೇರಿ‌ ಬುರ್ಖಾ ತೊಡಿಸಿ ರಮ್ಯಾ ಶೆಟ್ಟಿ ಕರೆದೊಯ್ದಿದ್ದ ಇಕ್ಬಾಲ್ ಹಾಗೂ ರಮ್ಯಾ ಶೆಟ್ಟಿ‌ ಪೊಲೀಸ್ ವಶದಲ್ಲಿದ್ದಾರೆ.

Leave a Reply

Your email address will not be published.