Pakistan Election : ಮತಗಟ್ಟೆಯ ಬಳಿ ಸೂಸೈಡ್ ಬಾಂಬ್ ದಾಳಿ : 20ಕ್ಕೂ ಹೆಚ್ಚು ಜನರ ಸಾವು

ಪಾಕಿಸ್ತಾನದಲ್ಲಿ ಹೊಸ ಸರ್ಕಾರದ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ದು, ಬುಧವಾರ ಮತಗಟ್ಟೆ ಕೇಂದ್ರದ ಬಳಿ ಉಗ್ರನೋರ್ವ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಪರಿಣಾಮವಾಗಿ 20ಕ್ಕೂ ಜನ ಸಾವಿಗೀಡಾಗಿರುವ ಘಟನೆ ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿ ಬುಧವಾರ ನಡೆದಿದೆ. ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

‘ ಕ್ವೆಟ್ಟಾ ಪ್ರಾಂತ್ಯದ ಮತಗಟ್ಟೆಯೊಂದರ ಒಳಗೆ ಪ್ರವೇಶಿಸಲು ಭಯೋತ್ಪಾದಕ ಯತ್ನಿಸಿದ್ದಾನೆ. ಆತನನ್ನು ಪೋಲೀಸರು ತಡೆಯಲು ಮುಂದಾದಾಗ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ‘ ಎಂದು ಸ್ಥಳೀಯ ಅಧಿಕಾರಿ ಹಾಶಿಮ್ ಘಿಲ್ಜಾಯಿ ತಿಳಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನ ಮುಸ್ಲಿಮ್ ಲೀಗ್ ಪಾರ್ಟಿಯ ನವಾಜ್ ಷರೀಫ್ ಹಾಗೂ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ನಡುವೆ ಪ್ರಧಾನಿ ಹುದ್ದೆಗೇರಲು ತೀವ್ರ ಪೈಪೋಟಿ ಏರ್ಪಟ್ಟಿದೆ.

Leave a Reply

Your email address will not be published.

Social Media Auto Publish Powered By : XYZScripts.com