ಮೈಸೂರು : ಸಮಸ್ಯೆ ಆಲಿಸಲು ಬಂದ ಶಾಸಕ ರಾಮದಾಸ್ ಗೆ ಮಹಿಳೆಯರಿಂದ ತರಾಟೆ…!

ಮೈಸೂರು : ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕರಾಗಿರುವ ಎಸ್. ಎ ರಾಮದಾಸ್ ಜನರ ಸಮಸ್ಯೆ ಆಲಿಸಲು ಬಂದಾಗ ಸ್ಥಳೀಯ ಮಹಿಳೆಯೊಬ್ಬರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೆ.ಆರ್ ಕ್ಷೇತ್ರದ ವಾರ್ಡ್ ನಂ.1ರಲ್ಲಿ ಶಾಸಕ ರಾಮದಾಸ್ ಪಾಲಿಕೆ ಸದಸ್ಯರ ಜತೆ ಪಾದಯಾತ್ರೆ ಮಾಡುತ್ತಾ ಸಮಸ್ಯೆ ಆಲಿಸುತ್ತಿದ್ದರು . ಈ ವೇಳೆ ಶಾಸಕ ರಾಮದಾಸ್ ಅವರಿಗೆ ಮತ್ತು ಪಾಲಿಕೆ ಸದಸ್ಯರಿಗೆ ಸ್ಥಳೀಯ ಮಹಿಳೆಯರು ತರಾಟೆ ತೆಗೆದುಕೊಂಡರು.  ಈ ಸಂದರ್ಭದಲ್ಲಿ ರಾಮದಾಸ್ ಅವರು ಜತೆ ಮಾತಿನ ಚಕಮಕಿಗಿಳಿದ ಸ್ಥಳೀಯರು ಇಲ್ಲಿ ಕಾರ್ಪೊರೇಟರ್ ಬಿವಿ ಮಂಜುನಾಥ್ ಯಾವುದೇ ಕೆಲಸ ಮಾಡಿಲ್ಲ. ಒಳ ಚರಂಡಿ ಇಲ್ಲದ ಕಾರಣ ಮಳೆ ನೀರು ಮನೆ ಒಳಗೆ ನುಗ್ಗುತ್ತೆ ಈ ಬಗ್ಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲವೆಂದು ಮಹಿಳೆಯರು ಫುಲ್ ಗರಂ ಆಗಿ ಶಾಸಕರ ಮುಂದೇಯೇ  ತರಾಟೆ ತೆಗೆದುಕೊಂಡ್ರು.

ಜನಸಾಮಾನ್ಯರ ಸಮಸ್ಯೆ ಆಲಿಸಿ ಬಳಿಕ ಮಾತನಾಡಿದ ಶಾಸಕ ರಾಮದಾಸ್, ಅಗ್ರಹಾರ ಮಾರುಕಟ್ಟೆ ಉದ್ದಾರಕ್ಕಾಗಿ ಅತಿ ಶೀಘ್ರವಾಗಿ ಕೈಗೆತ್ತಿ ಕೊಳ್ಳಲಾಗುವುದು. ಇನ್ನು ದಿವಾನ್ಸ್ ರಸ್ತೆಯಲ್ಲಿ ಪ್ರತಿ ಗುರುವಾರ ಟ್ರಾಫಿಕ್ ಕಿರಿ ಕಿರಿ ಹಿನ್ನೆಲೆ ಸ್ಥಳಕ್ಕೆ ಒಬ್ಬ ಟ್ರಾಫಿಕ್ ಪೊಲೀಸ್ ನೇಮಿಸಲಾಗುವುದು. ಲ್ಯಾನ್ಸ್ ಸ್ಟೋರ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com