ಹಾಸನ : ಸರ್ಕಾರಿ ಶಾಲೆಗೆ ಸಚಿವ ಎನ್.ಮಹೇಶ್ ಧಿಡೀರ್ ಭೇಟಿ : ಮಕ್ಕಳಿಗೆ ಶಿಕ್ಷಣ ಮಂತ್ರಿಗಳ ಪಾಠ

ಹಾಸನ : ಸರ್ಕಾರಿ ಶಾಲೆಗೆ ಶಿಕ್ಷಣ ಸಚಿವರಾದ ಎನ್.ಮಹೇಶ್ ಅವರು ದಿಢೀರ್ ಭೇಟಿ ನೀಡಿದ್ದಾರೆ. ಹಾಸನದ ಚನ್ನಪಟ್ಟಣ ದಲ್ಲಿರುವ ಹಿರಿಯ ಪ್ರಾಥಮಿಕ-ಪ್ರೌಢ ಶಾಲೆಯಲ್ಲಿ ಸಚಿವ ಎನ್.ಮಹೇಶ್ ಮಕ್ಕಳೊಂದಿಗೆ ಕುಳಿತು ಪಠ್ಯ ಪುಸ್ತಕ ಹಾಗೂ ಪಾಠ ಪ್ರವಚನದ ಬಗ್ಗೆ ಪ್ರಶ್ನಿಸಿದ್ದಾರೆ.

ಶಾಲಾ-ಕಾಲೇಜು ಕೊಠಡಿ, ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಕ್ಕಳಿಗೆ ಪಾಠ ಮಾಡಿದ್ದಾರೆ.

ಒಂದು ಗಂಟೆಗೂ ಹೆಚ್ಚು ಸಮಯ ಶಾಲೆ ಒಳಗೆ ಕಾಲ ಕಳೆದ ಸಚಿವರು, ಪುಸ್ತಕ-ಪೆನ್ನು ಹಿಡಿದು ಮಕ್ಕಳಿಗೆ ಪಾಠ ಮಾಡಿದ್ದಾರೆ.

Leave a Reply

Your email address will not be published.