Cricket : ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆ : ಸೆಪ್ಟೆಂಬರ್ 19 ರಂದು ಭಾರತ – ಪಾಕ್ ಪಂದ್ಯ

ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಏಷ್ಯಾಕಪ್-2018 ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 15 ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯ ವಹಿಸಲಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಸೆಪ್ಟೆಂಬರ್ 19 ರಂದು ಗ್ರೂಪ್ ಹಂತದ ಪಂದ್ಯ ನಡೆಯಲಿದೆ. 6 ದೇಶಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಆಡಲು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫಘಾನಿಸ್ತಾನ ಈಗಾಗಲೇ ಅರ್ಹತೆ ಗಳಿಸಿವೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಯುಎಇ, ಸಿಂಗಾಪೂರ್, ಓಮನ್, ನೇಪಾಳ, ಮಲೇಷ್ಯಾ ಹಾಗೂ ಹಾಂಕಾಂಗ್ ತಂಡಗಳು ಪೈಪೋಟಿ ನಡೆಸಲಿವೆ.

15 ಸೆಪ್ಟೆಂಬರ್ – ಬಾಂಗ್ಲಾದೇಶ vs ಶ್ರೀಲಂಕಾ (ದುಬೈ)

16 ಸೆಪ್ಟೆಂಬರ್ – ಪಾಕಿಸ್ತಾನ vs  ಕ್ವಾಲಿಫೈರ್ (ದುಬೈ)

17 ಸೆಪ್ಟೆಂಬರ್ – ಶ್ರೀಲಂಕಾ vs ಅಫಘಾನಿಸ್ತಾನ (ಅಬು ಧಾಬಿ)

18 ಸೆಪ್ಟೆಂಬರ್ – ಭಾರತ vs ಕ್ವಾಲಿಫೈರ್ (ದುಬೈ)

19 ಸೆಪ್ಟೆಂಬರ್ – ಭಾರತ vs ಪಾಕಿಸ್ತಾನ (ದುಬೈ)

20 ಸೆಪ್ಟೆಂಬರ್ – ಬಾಂಗ್ಲಾದೇಶ vs ಅಫಘಾನಿಸ್ತಾನ (ಅಬು ಧಾಬಿ)

ಸೂಪರ್ – 4

21 ಸೆಪ್ಟೆಂಬರ್ – ಗ್ರೂಪ್ A ವಿನ್ನರ್ vs ಗ್ರೂಪ್ B ರನ್ನರ್ ಅಪ್ (ದುಬೈ)

21 ಸೆಪ್ಟೆಂಬರ್ – ಗ್ರೂಪ್ B ವಿನ್ನರ್ vs ಗ್ರೂಪ್ A ರನ್ನರ್ ಅಪ್ (ಅಬು ಧಾಬಿ)

23 ಸೆಪ್ಟೆಂಬರ್ – ಗ್ರೂಪ್ A ವಿನ್ನರ್ vs ಗ್ರೂಪ್ A ರನ್ನರ್ ಅಪ್ (ದುಬೈ)

23 ಸೆಪ್ಟೆಂಬರ್ – ಗ್ರೂಪ್ B ವಿನ್ನರ್ vs ಗ್ರೂಪ್ B ರನ್ನರ್ ಅಪ್ (ಅಬು ಧಾಬಿ)

25 ಸೆಪ್ಟೆಂಬರ್ – ಗ್ರೂಪ್ B ವಿನ್ನರ್ vs ಗ್ರೂಪ್ B ವಿನ್ನರ್ (ದುಬೈ)

26 ಸೆಪ್ಟೆಂಬರ್ – ಗ್ರೂಪ್ A ರನ್ನರ್ ಅಪ್ vs ಗ್ರೂಪ್ B ರನ್ನರ್ ಅಪ್ (ಅಬು ಧಾಬಿ)

ಫೈನಲ್

28 ಸೆಪ್ಟೆಂಬರ್– ಏಷ್ಯಾ ಕಪ್ 2018 ಫೈನಲ್ (ದುಬೈ)

Leave a Reply

Your email address will not be published.

Social Media Auto Publish Powered By : XYZScripts.com