ವಿದ್ಯಾರ್ಥಿಗಳಿಗೆ ಉಚಿತಬಸ್ ಪಾಸ್ ನೀಡದಿದ್ದರೇ CM ವಿರುದ್ಧ ಪ್ರತಿಭಟನೆ BJPಯಿಂದ ವಾರ್ನಿಂಗ್

ಬೆಂಗಳೂರು : ಸರ್ಕಾರಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡುವುದರ ಮೂಲಕ ಸಿಎಂ ಎಚ್.ಡಿ ಕುಮಾರಸ್ವಾಮಿ ತಾರತಮ್ಯ ಎಸಗಿದ್ದಾರೆಂದು  ಬಿಜೆಪಿ ಆರೋಪಿಸಿದೆ.  ಒಂದು ವೇಳೆ ಸಿಎಂ ತಮ್ಮ ನಿರ್ಧಾರ ಬದಲಿಸಿ ಎಲ್ಲಾ ಮಕ್ಕಳಿಗೆ ವಿಸ್ತರಿಸದಿದ್ದಾರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆಗೂ ಉಚಿತ ಬಸ್ ಪಾಸ್  ನೀಡಿತ್ತು, ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರಿಸುವುದಾಗಿ ಹೇಳಿದ್ದರು ಎಂದು ಬಿಜೆಪಿ ತಿಳಿಸಿತು. ಶೇ.25 ರಷ್ಟು ವಿದ್ಯಾರ್ಥಿಗಳು ಆರ್ ಟಿ ಇ ಅಡಿ ಖಾಸಗಿ ಶಾಲಾ ಕಾಲೆಜು ಸೇರಿವೆ,ಅವರೆಲ್ಲಾ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ,ಅವರು ಕೂಡ ಉಚಿತ ಬಸ್ ಪಾಸ್ ಗೆ ಯೋಗ್ಯರಾಗಿದ್ದಾರೆ.  ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಬಿಜೆಪಿ ಶಾಸಕ ಎನ್, ನಾಯರಾಯಣ ಸ್ವಾಮಿ ಆಗ್ರಹಿಸಿದ್ದಾರೆ.

Leave a Reply

Your email address will not be published.