ಗದಗ : ಕ್ಷುಲ್ಲಕ ಕಾರಣಕ್ಕೆ ಬಾರ್ ನಲ್ಲಿ ಗಲಾಟೆ : ನಶೆಯಲ್ಲಿ ವೇಟರ್ ಮೇಲೆ ಬಾಟಲಿಯಿಂದ ಹಲ್ಲೆ..

ಗದಗ : ಕ್ಷುಲ್ಲಕ ಕಾರಣಕ್ಕೆ ಬಾರ್ ನಲ್ಲಿ ಗಲಾಟೆಯಾಗಿರುವ ಘಟನೆ ಗದಗ ನಗರದ ವಿಶ್ವ ಬಾರ್ & ರೆಸ್ಟೋರೆಂಟ್ ನಲ್ಲಿ ನಡೆದಿದೆ. ಬಸವರಾಜ ಮಾಳಗಿ ಎಂಬುವನು ಕುಡಿದು ಮತ್ತಿನಲ್ಲಿ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ. ಗದಗನ ಕಾಶಿ ವಿಶ್ವನಾಥ ನಗರ ನಿವಾಸಿಯಾದ ಬಸವರಾಜ್ ಮಳಗಿ ಕುಡಿದ‌ ಮತ್ತಿನಲ್ಲಿ ಸಪ್ಲಾಯರ್ ಹಾಗೂ ಗ್ರಾಹಕನಿಗೆ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ.

ಬಾಟಲ್ ನಿಂದ ಬಾರ್ ನ ಕಿಟಕಿ ಗ್ಲಾಸ್ ಪುಡಿ ಪುಡಿಯಾಗಿದ್ದು, ಬಾರ್ ಸಪ್ಲಾಯರ್ ಚಂದ್ರಶೇಖರ್ ಹಾಗೂ ಗ್ರಾಹಕ ಬಚ್ಚಮ್ ಮೋಗವೀರ ಎಂಬುವರಿಗೆ ತಲೆಗೆ ಗಂಭಿರ ಗಾಯಗಳಾಗಿವೆ. ಬಿಡಿಸಲು ಬಂದ ಬಾರ್ ಮಾಲಿಕ ಅಕ್ಷಯ್ ಮೇಲೂ ಹಲ್ಲೆ ಮಾಡಿದ್ದಾನೆ. ಬಾಟಲ್‌ನಿಂದ ಹೊಡೆದು ಹಲ್ಲೆಮಾಡಿ ಬಸವರಾಜ್ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಗದಗ ಶಹರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ನಗರದ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com