ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ : ಮೂಲಭೂತ ಸೌಲಭ್ಯ ಒದಗಿಸುವಂತೆ ಅಗ್ರಹ

ಬಳ್ಳಾರಿ  : ಸರ್ಕಾರಿ ಪಿಯು ಕಾಲೇಜ್ ಗೆ ಮೂಲಭೂತ ಸೌಲಭ್ಯಗಳು ಒದಗಿಸಬೇಕೆಂದು ಅಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿರುವ ಘಟನೆ ಕೊಟ್ಟುರು ಪಟ್ಟಣದಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಗೊರ್ಲಿಬಸಪ್ಪ ಪಿಯು ಕಾಲೇಜ್ ಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಪ್ರಯೋಗಾಲ ಹಾಗೂ ಕೊಠಡಿಗಳ ಸಮಸ್ಯೆ ಇದ್ದು, ಸಾಕಷ್ಟು ಬಾರಿ ಮನವಿ ಮಾಡಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಉಪನ್ಯಾಸಕರು ಬೇಕಾಬಿಟ್ಟಿ ಪಾಠ ಮಾಡ್ತಾರೆ, ಸರಿಯಾಗಿ ಬೋಧನೆ ಮಾಡೋಲ್ಲ. ಈ ಕೂಡಲೇ ಸರಕಾರ ಪಿಯು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಎಂದು ತರಗತಿಯನ್ನು ಬಹಿಷ್ಕಾರ ಮಾಡಿ ವಿದ್ಯಾರ್ಥಿಗಳು‌ ಹೋರಾಟ ಮಾಡಿದ್ದಾರೆ.

 

Leave a Reply

Your email address will not be published.