ದೇಶದ ಗಡಿ ರಕ್ಷಣೆ ಮಾಡುವ ಸೈನಿಕರು ದೇವರಿದ್ದಂತೆ : ಬಸವರಾಜ್ ಹೊರಟ್ಟಿ

ಬೆಂಗಳೂರು :  ಹುತಾತ್ಮ ಯೋಧರ ಕುಟುಂಬದ ಕಲ್ಯಾಣ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಲಾಗುವುದು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ 19ನೇ ಕಾರ್ಗಿಲ್‌ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಬಸವರಾಜ್ ಹೊರಟ್ಟಿ ”ಯೋಧರ ಕುಟುಂಬಕ್ಕೆ ನೆರವಾಗುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶದ ಗಡಿ ರಕ್ಷಣೆ ಮಾಡುವ ಸೈನಿಕರು ದೇವರಿದ್ದಂತೆ. ಇನ್ನೊಂದು ವಾರದಲ್ಲಿ ಯಾವ ರೀತಿ ಕಾರ್ಯಕ್ರಮ ರೂಪಿಸಬಹುದೆಂಬ ಬಗ್ಗೆ ನಿರ್ಧರಿಸೋಣ,” ಎಂದು ಹೇಳಿದರು.

ಇನ್ನ ನಿವೃತ್ತ ಏರ್‌ ಕಮಾಂಡರ್‌ ಚಂದ್ರಶೇಖರ್‌  ”ಸಂಪರ್ಕ ಮಾಡುವುದಕ್ಕೆ ಸಾರಿಗೆ ವ್ಯವಸ್ಥೆಯೂ ಸರಿಯಾಗಿ ಇಲ್ಲದ ಕಡೆಗಳಲ್ಲಿ ಹೋರಾಟ ನಡೆಸಿದ ನಮ್ಮ ಸೇನೆ ಪಾಕಿಸ್ತಾನವನ್ನು ದಿಟ್ಟತನದಿಂದ ಹಿಮ್ಮೆಟ್ಟಿಸಿತು. ಹಲವು ಯೋಧರು ಹುತಾತ್ಮರಾಗಿ ದೇಶದ ರಕ್ಷಣೆ ಮಾಡಿದರು” ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳಾದ ಎಸ್‌.ಸಿ.ಭಂಡಾರಿ, ಕರ್ನಲ್‌ ಮಂಜೀತ್‌ ಸಿಂಗ್‌, ಕ್ಯಾಪ್ಟನ್‌ ಚಿದಂಬರಂ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಭಾಗವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com