ಶಿರೂರು ಶ್ರೀಗಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧ ಕಳುವಾಗಿದ್ದ ಮಠದ ಡಿವಿಆರ್ ಪತ್ತೆ…!  

ಉಡುಪಿ : ಶಿರೂರು ಶ್ರೀಗಳ ನಿಗೂಢ ಸಾವಿಗೆ ಸಂಬಂಧಿಸಿದಂತೆ ದೀನೆ ದೀನೆ ತಿರುವು ಪಡೆದುಕೊಳ್ಳುತ್ತಿದ್ದು, ನಾಪತ್ತೆಯಾಗಿದ್ದ ಮಠದ ಡಿವಿಆರ್ ಪತ್ತೆಯಾಗಿದ್ದು, ಮತ್ತು ಬಾವಿಯಲ್ಲಿ ಮಧ್ಯದ ಬಾಟಲ್ ಕೂಡ ಪತ್ತೆಯಾಗಿದೆ.

ಕೊನೆಗೂ ಶಿರೂರು ಮಠದ ಸಿ.ಸಿ. ಕ್ಯಾಮರಾದ ಡಿವಿಆರ್ ಪತ್ತೆಯಾಗಿದೆ. ಈ ಮೂಲಕ ಪೊಲೀಸರಿಗೆ ಮಹತ್ವದ ದಾಖಲೆ ಸಿಕ್ಕಂತಾಗಿದೆ. ಪೊಲೀಸರಿಗೆ ನಿನ್ನೆಯೇ ಡಿವಿಆರ್ ಸಿಕ್ಕಿತ್ತು ಎಂದು ಹೇಳಲಾಗಿತ್ತು. ಆದ್ರೆ, ಇದನ್ನ ಅಲ್ಲಗೆಳೆದಿದ್ದ ಪೊಲೀಸರು ಡಿವಿಆರ್‌ಗಾಗಿ ಶೋಧ ಮುಂದುವರೆಸಿದ್ದರು. ಇಂದು ಪೊಲೀಸರ ಯತ್ನಕ್ಕೆ ಫಲ ಸಿಕ್ಕಿದೆ.

ಇನ್ನು, ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಇಂದು ಶಿರೂರು ಮಠ ಮತ್ತು ಕೃಷ್ಣಮಠದ ಆವರಣದಲ್ಲಿರುವ ಬಾವಿಯಲ್ಲಿ ಕೂಡ ಶೋಧ ನಡೆಸಿತು. ಆಶ್ಚರ್ಯ ಅಂದ್ರೆ, ಬಾವಿಯಲ್ಲಿ ಒಂದು ಮದ್ಯದ ಬಾಟಲ್‌ ಹಾಗೂ ಕೆಲವು ವಸ್ತುಗಳನ್ನ ಮೇಲಕ್ಕೆತ್ತಲಾಗಿದೆ. ಶೋಧ ನಡೆಸಿ ಸಂಗ್ರಹಿಸಿದ ವಸ್ತುಗಳನ್ನ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಕೊಂಡು ಹೋದರು.

 

Leave a Reply

Your email address will not be published.

Social Media Auto Publish Powered By : XYZScripts.com