ದಾವಣಗೆರೆ : ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಶಾಸಕ ಎಸ್. ರಾಮಪ್ಪ

ದಾವಣಗೆರೆ : ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಹರಿಹರ ಶಾಸಕ ಎಸ್. ರಾಮಪ್ಪ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ‌ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಪರಸ್ಪರ ಡಿಕ್ಕಿ ಆಗಿ ನಾಲ್ಕು ಜನರಿಗೆ ಗಾಯಗೊಂಡಿದ್ದರು.

ಈ ಸಮಯದಲ್ಲಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಶಾಸಕ ರಾಮಪ್ಪ, ತಮ್ಮ ಕಾರ್ ನಲ್ಲಿ ಗಾಯಾಳುಗಳನ್ನ ಆಸ್ಪತ್ರೆ ಗೆ ಸಾಗಿಸಿದ್ದಾರೆ. ಜೊತೆಗೆ ಗಾಯಾಳುಗಳ ಸಂಬಂಧಿಗಳು ಬರುವವರೆಗೆ ಶಾಸಕರು ಆಸ್ಪತ್ರೆಯಲ್ಲಿಯೇ ನಿಂತಿದ್ದಾರೆ. ವೈದ್ಯರಿಗೆ ಹೇಳಿ ಹರಿಹರ ತಾಲೂಕಾ ಆಸ್ಪತ್ರೆಯಲ್ಲಿ ಶಾಸಕ ರಾಮಪ್ಪ ಚಿಕಿತ್ಸೆ ಕೊಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com