ಹುಟ್ಟು ಹಬ್ಬದ ಸಂಭ್ರಮದಲ್ಲಿ ಚಹಲ್ : ಕೀಟಲೆಯೊಂದಿಗೆ ಶುಭ ಕೋರಿದ ರೋಹಿತ್ ಶರ್ಮಾ..!

ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಸಿಂಗ್ ಚಹಲ್ ಮಂಗಳವಾರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್ ಡೇ ಬಾಯ್ ಚಹಲ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ತಮ್ಮ ಸಹ ಆಟಗಾರ ಚಹಲ್ ಗೆ ಟ್ವೀಟ್ ಮಾಡುವ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಶುಭ ಕೋರುವುದಕ್ಕಷ್ಟೇ ಸೀಮಿಯವಾಗದ ರೋಹಿತ್, ಚಹಲ್ ಕಾಲೆಳೆದು ಕೀಟಲೆ ಮಾಡಿದ್ದಾರೆ.

‘ ಲಿಟಲ್ ಬ್ರದರ್ ಚಹಲ್ ಗೆ ಹ್ಯಾಪಿ ಬರ್ತ್ ಡೇ, ನಿನ್ನ ಸ್ಪಿನ್ ಜಾಲದಲ್ಲಿ ಬ್ಯಾಟ್ಸಮನ್ ಗಳನ್ನು ಬಂಧಿಸಿ ಹೀಗೆಯೇ ಎಲ್ಲರನ್ನು ಇಂಪ್ರೆಸ್ ಮಾಡುತ್ತಿರು.. ಕಳೆದು ಹೋಗಿರುವ ಆ ನಿನ್ನ ಒಂದು ಹಲ್ಲು ಬೇಗ ವಾಪಸ್ ಸಿಗಲಿ ಎಂದು ಆಶಿಸುತ್ತೇನೆ ‘ ಎಂದು ಹಿಟ್ ಮ್ಯಾನ್ ತಮಾಷೆ ಮಾಡಿದ್ದಾರೆ.

Leave a Reply

Your email address will not be published.