ನನಗೆ ಮಕ್ಕಳಿದ್ದಾರೆ ಎಂಬ ಆರೋಪ ಸಾಬೀತಾದರೆ ಪೀಠತ್ಯಾಗ ಮಾಡುವೆ : ಪೇಜಾವರ ಶ್ರೀ

ಉಡುಪಿ : ‘ ನನಗೆ ಮಕ್ಕಳಿದ್ದಾರೆ ಎಂಬ ಆರೋಪ ಸಾಬೀತಾದರೆ ಪೀಠತ್ಯಾಗ ಮಾಡುವೆ ‘  ಎಂದು ಪೇಜಾವರ ಶ್ರೀ ಸವಾಲು ಹಾಕಿದ್ದಾರೆ. ‘ ತಾರುಣ್ಯದಲ್ಲಿ ಸ್ತ್ರೀ ಸಂಗವಿತ್ತು ಅನ್ನೋದು ಸುಳ್ಳು, ತಮಿಳ್ನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಶುದ್ದಸುಳ್ಳು ‘ ಎಂದಿದ್ದಾರೆ.

‘ ಈ ಹಿಂದೆ ಇದೇ ಅಭಿಪ್ರಾಯ ಹೇಳಿ ಕೆಲವರು ಪತ್ರ ಬರೆದಿದ್ದರು. ಅದರಲ್ಲಿ ನನಗೆ ಗಂಡುಮಗು ಇದೆ ಎಂದು ಬರೆಯಲಾಗಿತ್ತು. ಇವೆಲ್ಲಾ ಕೇವಲ ಕಲ್ಪನೆ, ದೇಶದ ಯಾರೂ ನಂಬಲ್ಲ. ಯಾವುದೇ ಪರೀಕ್ಷೆ, ವಿಚಾರಣೆ ಎದುರಿಸಲು ನಾನು ಸಿದ್ದವಾಗಿದ್ದೇನೆ. ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ, ಇದು ಸಿದ್ದವಾದರೆ ನಾನು ಪೀಠತ್ಯಾಗ ಮಾಡುವೆ ‘ ಎಂದಿದ್ದಾರೆ.

ಚೆನ್ನೈ ನಿಂದ ಪತ್ರಿಕಾಹೇಳಿಕೆ ಬಿಡುಗಡೆ ಮಾಡಿದ ಸ್ವಾಮೀಜಿ ‘ ಶೀರೂರು ಬಗ್ಗೆ ನನ್ನ ಹೇಳಿಕೆ ಯನ್ನು ಕೆಲವರು ಆಕ್ಷೇಪಿಸಿದ್ದಾರೆ. ಮಾಧ್ಯಮ ದವರ ಪ್ರಶ್ನೆಗೆ ನಾನು ಉತ್ತರ ನೀಡಿದ್ದಷ್ಟೇ. ರಘುವಲ್ಲಭ ತೀರ್ಥ, ಮನೋಜ್ಞ ತೀರ್ಥ, ಸುಬ್ರಹ್ಮಣ್ಯದ ಸ್ವಾಮೀಜಿಗಳ ಪೀಠತ್ಯಾಗದಲ್ಲಿ ನನ್ನ ಪಾತ್ರವಿಲ್ಲ. ವಿಶ್ವವಿಜಯರನ್ನು ನಾನು ಕಳುಹಿಸಿಯೇ ಇಲ್ಲ, ಅವರಾಗಿಯೇ ಹೋದರು, ನನಗೆ ತಿಳಿಸದೆ ಪೀಠತ್ಯಾಗ ಮಾಡಿದ್ದರು. ಎಲ್ಲದಕ್ಕೂ ನನ್ನನ್ನು ದೂಷಿಸುವುದು ಸರಿಯಲ್ಲ ‘ ಎಂದು ಹೇಳಿದ್ದಾರೆ.

‘ ಶೀರೂರು ಸ್ವಾಮೀಜಿಯಿಂದ ನಾನು ಯಾವುದೇ ಹಣ ಅಪೇಕ್ಷಿಸಿಲ್ಲ. ಬಹಿರಂಗ ವಿಚಾರಣೆಗೆ ನಾನು ಸದಾ ಸಿದ್ದ ‘ ಎಂದು ಪೇಜಾವರ ಶ್ರೀ ಪತ್ರಿಕಾ ಹೇಳಿಕೆಯ ಮೂಲಕ ಶೀರೂರು ಆಡಿಯೋದಲ್ಲಿ ಮಾಡಿದ ಆರೋಪಗಳಿಗೆ ನೀಡಿದ್ದಾರೆ. ಶೀರೂರು ಸ್ಬಾಮೀಜಿ ಸಾವಿನ‌ ಮುನ್ನ ಪೇಜಾವರ ಸ್ವಾಮೀಜಿ ಬಗೆಗಿನ ಆಡಿಯೋ ಸದ್ದು ಮಾಡಿತ್ತು.

Leave a Reply

Your email address will not be published.