ಈ ರಾಜ್ಯದಲ್ಲಿ ಹಸುವಿನ ಹಾಲಿಗಿಂತ ಗೋ ಮೂತ್ರಕ್ಕೇ ಹೆಚ್ಚು ಬೆಲೆ…?

ಜೈಪುರ್ : ಈ ರಾಜ್ಯದಲ್ಲಿ ಹಾಲಿನಷ್ಟೇ ಬೆಲೆ ಹಸುವಿನ ಮೂತ್ರಕ್ಕೂ ಕೂಡ ಇದೆ.  ರಾಜಸ್ಥಾನದ ಹೈನುಗಾರರಿಗೆ ಆದಾಯದ ಮೂಲವಾಗಿ ಪರಿವರ್ತಿತವಾಗಿದೆ. ಮರುಭೂಮಿ ರಾಜ್ಯದ ರೈತರು ಗಿರ್ , ತಾರಿ ಅಂತಹ ಪ್ರಖ್ಯಾತ ತಳಿಯ ಹಸುವಿನ ಮೂತ್ರವನ್ನು ಸಗಟು ಮಾರುಕಟ್ಟೆಯಲ್ಲಿ ಲೀಟರ್‌ಗೆ 15ರಿಂದ 30 ರೂಪಾಯಿಗಳವರೆಗೆ ಮಾರುತ್ತಿದ್ದು, ಇದರಿಂದ ತುಂಬಾ ಲಾಭವಾಗಿದೆ.

ಪ್ರಪಂಚದಾದ್ಯಂತ ಮಾರಕ ಖಾಯಿಲೆಯಾಗಿ ಕಾಡುತ್ತಿರುವ ಕ್ಯಾನ್ಸರ್​ನ್ನೂ ಕೂಡ ಗುಣಪಡಿಸುವ ಶಕ್ತಿ ಗೋಮೂತ್ರದಲ್ಲಿದೆ ಎಂಬ ಸತ್ಯವನ್ನು ಹಲವು ವಿಜ್ಞಾನಿಗಳು ಒಪ್ಪಿಕೊಂಡಿದ್ದು, ಗೋ ಮೂತ್ರವನ್ನು ಕಣ್ಣಿಗೆ ನಮಸ್ಕರಿಸಿ  ನೀರಿನಂತೆ ಕುಡಿಯುತ್ತಾರೆ. ಇದೀಗ ರೈತರ ಬೆಳೆಗೂ ಗೋ ಮೂತ್ರ ತುಂಬಾ  ಸಹಾಯವಾಗುತ್ತದೆ.

ಹಾಲು ಲೀಟರ್‌ಗೆ 22 ರಿಂದ 25 ರೂಪಾಯಿಗೆ ಮಾರಾಟವಾಗುತ್ತಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.  ಜೈಪುರದ ಕೈಲಾಸ್ ಗುಜ್ಜರ್, ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದವರಿಗೆ ಆಕಳ ಮೂತ್ರ ಮಾರಲು ಆರಂಭಿಸಿದರು. ಇದರಿಂದ ತಮ್ಮ ಆದಾಯದಲ್ಲಿ 30%ರಷ್ಟು ಏರಿಕೆಯಾಯ್ತು ಎಂದು ತಿಳಿದುಬಂದಿದೆ.  ಹಸುವಿನ ಮೂತ್ರಕ್ಕೆ ಬೆಲೆ ಹೆಚ್ಚಾಗುತ್ತಿದ್ದಂತೆ ಗುಜ್ಜರ್ ಅದೃಷ್ಟ ಬದಲಾಗಿ ಹೋಯಿತು ಎನ್ನಲಾಗಿದೆ.

Related image

“ಮೂತ್ರವನ್ನು ಸಂಗ್ರಹಿಸಲು ನಾನು ರಾತ್ರಿಯಿಡಿ ಎಚ್ಚರವಾಗಿರಬೇಕಾಗುತ್ತದೆ. ಆಕಳು ನಮ್ಮ ತಾಯಿ. ಹೀಗಾಗಿ ನಾನು ರಾತ್ರಿ ಎಲ್ಲ ಕೊಟ್ಟಿಗೆಯಲ್ಲಿ ಕಳೆಯಲು ಬೇಸರ ಪಟ್ಟುಕೊಳ್ಳುವುದಿಲ್ಲ”, ಎನ್ನುವ ಗುಜ್ಜರ್, ಕಳೆದ 2 ದಶಕಗಳಿಂದ ಹಾಲಿನ ವ್ಯಾಪಾರ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com