ರವಾಂಡ ಅಧ್ಯಕ್ಷರ ಜೊತೆ ಮೋದಿ ಮಾತುಕತೆ : 200 ಮಿಲಿಯನ್ ಸಾಲ ಘೋಷಿಸಿದ ಭಾರತ….!

ಸೋಮವಾರ ಸಂಜೆ ರವಾಂಡಕ್ಕೆ ತೆರಳಿದ್ದರು.
ಸೋಮವಾರ ಮಧ್ನಾಹ ದೆಹಲಿಯಿಂದ ಪ್ರಧಾನಿ ಮೋದಿ, ಮೊದಲಿಗೆ ರವಾಂಡ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದರು. ಸಂಜೆ ವೇಳೆಗೆ ರವಾಂಡಕ್ಕೆ ತಲುಪಿದ ಭಾರತದ ಪ್ರಧಾನಿಯನ್ನು ಅಲ್ಲಿನ ಅಧ್ಯಕ್ಷ ಪಾಲ್ ಕಮಾಗೆ ಬರಮಾಡಿಕೊಂಡರು. ಈ ಮೂಲಕ ಭಾರತದ ಪ್ರಧಾನಿಯೊಬ್ಬರು ರವಾಂಡಕ್ಕೆ ಭೇಟಿ ನೀಡಿದ ಮೊದಲಿಗರು ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.  ನಂತರ ಪ್ರಧಾನಿ ಮೋದಿ ಹಾಗೂ ರವಾಂಡ ಅಧ್ಯಕ್ಷ ಪಾಲ್ ಕಮಾಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಇದೇ ಮೊದಲ ಬಾರಿಗೆ ರವಾಂಡಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿರುವ ಬೆನ್ನಲ್ಲೆ ಆ ರಾಷ್ಟಕ್ಕೆ ಭಾರತ ಸಾಲದ ನೆರವು ಒದಗಿಸಿದೆ. ಎರಡು ಪ್ರಕಾರಗಳಲ್ಲಿ ಭಾರತ, ರವಾಂಡಕ್ಕೆ 200 ಮಿಲಿಯನ್ ಡಾಲರ್ ಸಾಲವನ್ನು ಘೋಷಿಸಿದೆ.  ರವಾಂಡದಲ್ಲಿ ಕೈಗಾರಿಕಾ ಪಾರ್ಕ್​ಗಳು ಹಾಗೂ ಕಿಗಾಲಿ ವಿಶೇಷ ಆರ್ಥಿಕ ವಿಭಾಗ ಅಭಿವೃದ್ಧಿಗೆ 100 ಮಿಲಿಯನ್​ ಡಾಲರ್, ಕೃಷಿ ಅಭಿವೃದ್ಧಿಗೆ 100 ಮಿಲಿಯನ್​ ಡಾಲರ್ ಸಾಲವನ್ನು ಭಾರತ ಪ್ರಕಟಿಸಿದೆ.

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ, ರವಾಂಡದಲ್ಲಿ ಹೊಸ ಹೈಕಮಿಷನರ್​ ಕಚೇರಿ ತೆರೆಯುವುದಾಗಿ ಘೋಷಿಸಿದ್ದರು. ಭಾರತ ಹಾಗೂ ರವಾಂಡ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೈಕಮಿಷನರ್​ ಕಚೇರಿ ತೆರೆಯಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com