ಬೆಂಗಳೂರು : ಸಾವಿನಂಚಿನಲ್ಲಿರುವ ಬಾಲಕನ ಕೊನೆ ಆಸೆ ಈಡೇರಿಸಿದ ಇನ್ಸಪೆಕ್ಟರ್…!

ಬೆಂಗಳೂರು : ಮಾರಕ ರೋಗದಿಂದ ಬಳಲುತ್ತಿರುವ 12 ವರ್ಷದ ಬಾಲಕನ ಕನಸನ್ನು ನನಸು ಮಾಡುವ ಮೂಲಕ ವಿವಿ ಪುರಂ ಪೊಲೀಸ್ರು ಮುಂದಾಗಿದ್ದಾರೆ.  ಮೂಲತಃ ಚಿಂತಾಮಣಿ ಮೂಲದವನಾದ ಶಶಾಂಕ್, ಸುಜಾತ ಮುನಿರಾಜು ದಂಪತಿ ಪುತ್ರ.

ತಲಸ್ಸೇಮಿಯಾ ಮತ್ತು ಮಧುಮೇಹದಿಂದ ಬಳಲುತ್ತಿರುವ 12 ವರ್ಷದ ಬಾಲಕ ಶಶಾಂಕ್​ಗೆ ಪೊಲೀಸ್ ಇನ್ಸ್‌ಪೆಕ್ಟರ್ ಆಗುವ ಆಸೆಯಿತ್ತು. ಆದ್ರೆ ಆರೋಗ್ಯದ ಸಮಸ್ಯೆಯಿಂದ ಶಶಾಂಕ್​ಗೆ ಶಾಲೆಗೆ ಹೋಗಲೂ ಕೂಡ ಸಾಧ್ಯವಾಗಿಲ್ಲ. ವಾಣಿವಿಲಾಸ ಆಸ್ಪತ್ರೆಯಲ್ಲಿ ಸದ್ಯ ಶಶಾಂಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸ್ ಇನ್ಸ್‌ಪೆಕ್ಟರ್ ಆಗಬೇಕೆಂಬ ಆತನ ಆಸೆಯನ್ನು ಮೇಕ್ ಎ ವಿಶ್ ಫೌಂಡೇಷನ್ ಮತ್ತು ವಾಣಿವಿಲಾಸ ಆಸ್ಪತ್ರೆ ಮುಂದಾಗಿದ್ದರಿಂದ ಇಂದು ವಿವಿಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗುವ ಅವಕಾಶ ಕೂಡಿಬಂದಿದೆ.

ಈ ಮೂಲಕ ವಿವಿಪುರಂ ಠಾಣೆ ಇನ್ಸ್‌ಪೆಕ್ಟರ್ ಟಿ ಡಿ ರಾಜು ಬಾಲಕನಿಗೆ ಪೊಲೀಸ್ ಕ್ಯಾಪ್, ನಕಲಿ ಗನ್, ವಾಕಿ ಟಾಕಿ ಕೊಟ್ಟು, ಇನ್ಸ್‌ಪೆಕ್ಟರ್ ಚೇರ್‌ನಲ್ಲಿ ಕುರಿಸಿ ಬಾಲಕನ ಆಸೆ ಈಡೇರಿಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಬಾಲಕ ಒಂದು ಗಂಟೆ ಮಟ್ಟಿಗೆ ಶಶಾಂಕ್ ಚಾರ್ಜ್ ತೆಗೆದುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com