ಉಡುಪಿ : ಶೀರೂರು ಮಠದ ಉತ್ತರಾಧಿಕಾರಿಯಾಗಿ ಬರಲು ವಟುಗಳ ನಿರಾಸಕ್ತಿ…?

ಉಡುಪಿ : ಶೀರೂರು ಮಠದ  ಆಡಳಿತಕ್ಕೆ ಐವರು ಸದಸ್ಯರ ಸಮಿತಿ ರಚಿಸಲಾಗುತ್ತದೆ. ಮಠದ  ಆಡಳಿತ ವ್ಯವಸ್ಥಿತವಾಗಿ ನಡೆಸವ ಸಲುವಾಗಿ ಸೋದೆವಿಶ್ವವಲ್ಲಭ ಶ್ರೀಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಇದರಲ್ಲಿ ಶಿರೂರು ಮಠದ ವಿದ್ವಾಂಸರನ್ನೂ ಸೇರಿಸಲಾಗುತ್ತದೆ.

ಈಗ ಆಷಾಢಮಾಸವಾದ ಕಾರಣ ಶಿಷ್ಯ ಸ್ವೀಕಾರಕ್ಕೆ ತೋಡಕಾಗಿದೆ. ಆಷಾಡದ ಬಳಿಕವೇ ಶಿಷ್ಯ  ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗುವುದು ಅಂತ  ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಸ್ಪಷ್ಟಪಡಿಸಿದೆ. ಈಗಾಗಲೇ ವಟುವಿನ ಜಾತಕಪರಿಶೀಲನೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ  ನೇಮಕ ನಡೆಯಲಿದೆ. ಇಂದು ಈ ಸಮಿತಿ ರಚನೆ ಸಾಧ್ಯತೆಯಿದ್ದು, ಸದ್ಯ ಶಿರೂರು  ಮಠದ ನಿರ್ವಹಣೆಯ ಜವಾಬ್ದಾರಿಯನ್ನು ಸೋದೆ ವಿಶ್ವವಲ್ಲಭ ಶ್ರೀಗಳು ವಹಿಸಿಕೊಂಡಿದ್ದಾರೆ.

ಗಮನಾರ್ಹ ಸಂಗತಿ ಅಂದ್ರೆ ಉತ್ತರಾಧಿಕಾರಿಯಾಗಿಬರಲು ಹಲವರು ನಿರಾಸಕ್ತಿ ತೋರುತ್ತಿದ್ದಾರಂತೆ. ಇದಕ್ಕೆ ಕಾರಣ ಶಿರೂರು ಮಠದ  ಆರ್ಥಿಕ ಸ್ಥಿತಿ  ನಷ್ಟದಲ್ಲಿರುವ ಮಠವನ್ನು ಮುನ್ನಡೆಸುವುದು ಅಷ್ಟು ಸುಭವಂತೂ ಅಲ್ಲ  ಒಟ್ಟಾರೆ, ಚಾತುರ್ಮಾಸ್ಯದ ನಂತರ  ಉತ್ತರಾಧಿಕಾರಿಯಾಗಿ ನೇಮಕ ನಡೆಯಲಿದ್ದು, ಯಾರಾಗಲಿದ್ದಾರೆ ಉತ್ತರಾಧಿಕಾರಿ ಎಂಬ ಕುತೂಹಲ ಹೆಚ್ಚುತ್ತಿದೆ.

ಇನ್ನ ಶಿರೂರು ಶ್ರೀಗಳ ಸಾವಿನ ಸುತ್ತ ಹಲವಾರು ಕೈಗಳಿರುವ ಸಂದೇಹವಿದ್ದು, ಮರಣೋತ್ತರ ಪರೀಕ್ಷೆಯನ್ನು ಇನ್ನೆರಡು ದಿನದಲ್ಲಿ ತಾತ್ಕಾಲಿಕ ವರದಿ ಬಂದ ಬಳಿಕ  ಅಂತಿಮ ವರದಿ ಬರಲಿದೆ ಎಂದು ತಿಳಿದುಬಂದಿದೆ. ಮರಣೋತ್ತರ ವರದಿ ಬಂದರೂ ವಿಧಿವಿಜ್ಞಾನದ  ಪ್ರಯೋಗಾಲಯದ ವರದಿಯೇ ಅಂತಿಮಗೊಳಸಲಾಗುತ್ತದೆ ಎನ್ನಲಾಗಿದ್ದು, ಎಲ್ಲ ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com