ಶೀರೂರು ಶ್ರೀಗಳ ನಿಗೂಢ ಸಾವು ಪ್ರಕರಣ : ಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆ…!

ಉಡುಪಿ :  ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಕಾಣುತ್ತಿದೆ. ಈ ನಡುವೆ ಶೀರೂರು ಮೂಲಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆಸ್ಪತ್ರೆ ದಾಖಲಾದ ದಿನ‌ವೇ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿದೆ ಎನ್ನಲಾಗುತ್ತಿದ್ದು,  ಶೀರೂರು ಮೂಲಮಠದಿಂದ ವಸ್ತುಗಳನ್ನು ಎಗರಿಸಿದ್ದ ವ್ಯಕ್ತಿಯೇ ಸಿಸಿಟಿವಿಯ ಡಿವಿಆರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಶೀರೂರು ಮೂಲ ಮಠದ ಪ್ರವೇಶ ದ್ವಾರದಲ್ಲೇ ಸಿಸಿ ಟಿವಿಯನ್ನು ಅಳವಡಿಸಲಾಗಿದ್ದು, ಇದರಲ್ಲಿ ಮಠಕ್ಕೆ ಭೇಟಿ ನೀಡುವವರ ದೃಶ್ಯಾವಳಿ ದಾಖಲಾಗುತ್ತಿತ್ತು. ಆದರೆ ಇದೀಗ ಡಿವಿಆರ್ ನಾಪತ್ತೆಯಾಗಿರುವ ಕಾರಣ ಈ ವಿವರ ಲಭ್ಯವಾಗಲು ಕಷ್ಟಕರವಾಗಿದೆ. ಇನ್ನು ನಾಪತ್ತೆಯಾಗಿರುವ ಡಿವಿಆರ್ ಅನ್ನು ಹುಡುಕಲು ಪೋಲಿಸರು ಯತ್ನಿಸುತ್ತಿದ್ದು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published.