ರಾಜ್ಯ ಸಮ್ಮಿಶ್ರ ಸರ್ಕಾರ ಮನೆಯೊಂದು ಮೂರು ಬಾಗಿಲಿನಂತೆ ಆಗಿದೆ : ಸುರೇಶ ಅಂಗಡಿ

ಬೆಳಗಾವಿ : ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಹೇಳಿಕೆ ನೀಡಿದ್ದಾರೆ. ‘ ರಾಜ್ಯ ಸರ್ಕಾರ ಮನೆಯೊಂದು‌ ಮೂರು ಬಾಗಿಲು ಆಗಿದೆ. ಕುಮಾರಸ್ವಾಮಿ, ಪರಮೇಶ್ವರ ಮತ್ತು ಸಿದ್ದರಾಮಯ್ಯ ಒಂದೊದ್ದು ದಿಕ್ಕಿನಲ್ಲಿ ಇದ್ದಾರೆ. ಹಣದ ಕೊರತೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ‘ ಎಂದಿದ್ದಾರೆ.

‘ ರಾಹುಲ್ ಗಾಂಧಿಯ ವಿರುದ್ಧ ಹಕ್ಕು ಚುತಿ ಮಂಡನೆಗೆ ಪ್ರಲ್ಹಾದ್ ಜೋಶಿ ನೋಟೀಸ್ ನೀಡಿದ್ದಾರೆ. ನಾಳೆ ಲೋಕಸಭಾ ಸ್ಪೀಕರ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ತಾಯಿ ಮಗ ಅಲ್ಲ ಮಮ್ಮಿ ಮಗ. ಆದ್ದರಿಂದ ಸಂಸತ್ತಿನಲ್ಲಿ ಈ ರೀಯ ವರ್ತನೆ ತೋರಿದ್ದಾರೆ ‘ ಎಂದು ಹೇಳಿದ್ದಾರೆ

‘ ಸಿಎಂ ಎಚ್ ಡಿ ಕುಮಾರಸ್ವಾಮಿ ‌ಸಂಸದರ ಸಭೆ ಕರೆದಾಗ ಕೇವಲ ಕಾವೇರಿ ಚರ್ಚಿಸಿದ್ದಾರೆ. ನನಗೆ ಐ ಫೋನ್ ಬಂದಿದೆ ವಾಪಸ್ ಕೋಡುತ್ತೇನೆ. ರಾಜ್ಯ ಒಡೆಯುವ ಬಗ್ಗೆ ಯಾರು ಮಾತಾಡಬಾರದು. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆ. ನನಗೆ ಟಿಕೆಟ್ ಕೊಟ್ರೆ ನಿಲ್ಲುತ್ತೇನೆ. ಬೇರೆ ಯಾರಿಗಾದ್ರು ಟಿಕೆಟ್ ಕೊಟ್ರೆ ಪಕ್ಷದ ಪರ ಕೆಲಸ ಮಾಡುತ್ತೇನೆ ‘ ಎಂದು ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com