‘ಸಮರ್ಥನೆಗಾಗಿ ಸಂಪರ್ಕ ಅಭಿಯಾನ’ : ನಟ ಕಿಚ್ಚ ಸುದೀಪ್‍ ಭೇಟಿಯಾದ ಶಾಸಕ ಶ್ರೀರಾಮುಲು

ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ, ಶಾಸಕರೂ ಆದ ಶ್ರೀ ಬಿ. ಶ್ರೀರಾಮುಲು ಅವರು “ಸಮರ್ಥನೆಗಾಗಿ ಸಂಪರ್ಕ “ ಅಭಿಯಾನದಡಿಯಲ್ಲಿ ಖ್ಯಾತ ನಟರಾದ ಶ್ರೀ ಸುದೀಪ್ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಮಾಡಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಆಡಳಿತದ ಕೇಂದ್ರ ಸರಕಾರದ ನಾಲ್ಕು ವರ್ಷದ ಸಾಧನೆಯ ವಿವರಗಳುಳ್ಳ ಪುಸ್ತಿಕೆಯನ್ನು ನೀಡಿದರು.

2019 ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರು, ಜನಪ್ರಿಯ ವ್ಯಕ್ತಿಗಳನ್ನು, ಸೆಲೆಬ್ರಿಟಿಗಳನ್ನು, ಗಣ್ಯವ್ಯಕ್ತಿಗಳನ್ನು ಭೇಟಿ ಮಾಡಿ ಮೋದಿ ಸರ್ಕಾರದ ಸಾಧನೆಯನ್ನು ವಿವರಿಸುವ ‘ಸಮರ್ಥನೆಗಾಗಿ ಸಂಪರ್ಕ’ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಅಭಿಯಾನದ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದ ಶಾಸಕ ಶ್ರೀರಾಮುಲು, ಜೆಪಿ ನಗರದಲ್ಲಿರುವ ಸುದೀಪ್ ಅವರ ನಿವಾಸಕ್ಕೆ ಭೇಟಿ  ಕೊಟ್ಟು ಕೇಂದ್ರ ಸರ್ಕಾರದ ಸಾಧನೆಯ ಕುರಿತಾದ ಪುಸ್ತಕವನ್ನು ನೀಡಿದ್ದಾರೆ. ಶ್ರೀರಾಮುಲು ಅವರ ಜೊತೆ ನಟ ಸುದೀಪ್ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಮುಲು ಪರ ನಡೆಸಿದ ಪ್ರಚಾರ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು.

Leave a Reply

Your email address will not be published.