ಪಾಕ್ ಧ್ವಜ ಹಾರಿಸಿದ ಪ್ರಕರಣ : ಪರಶುರಾಮ್ ವಾಗ್ಮೋರೆ ಸೇರಿ 6 ಜನ ನಿರ್ದೋಷಿ ಎಂದ ಕೋರ್ಟ್

ವಿಜಯಪುರ : ಗೌರಿ ಹತ್ಯೆಯ ಆರೋಪಿ ಪರಶುರಾಮ್ ವಾಗ್ಮೋರೆ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ನಿರ್ದೋಶಿ ಎಂದು ವಿಜಯಪುರ ಜಿಲ್ಲಾ‌ ನ್ಯಾಯಾಲಯ ತೀರ್ಪು ನೀಡಿದೆ. 2012 ಜನವರಿ 1 ಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಹಶಿಲ್ದಾರ ಕಚೇರಿ‌‌ ಬಳಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಆರೋಪ ಪರಶುರಾಮ ವಾಗ್ಮೋರೆ ಮೇಲಿತ್ತು, ವಾಗ್ಮೋರೆ ಸೇರಿದಂತೆ ಆರು ಮಂದಿ ನಿರ್ದೋಶಿ ಎಂದು ತೀರ್ಪು ನೀಡಿದ್ದು, ಸರಿಯಾದ ಸಾಕ್ಷಾಧಾರವಿಲ್ಲದೆ ಕೇಸ್ ಖುಲಾಸೆಗೊಳಿಸಲಾಗಿದೆ.

ಗೌರಿ ಲಂಕೇಶ ಹತ್ಯೆ ಪ್ರಕರಣದ ಪರಶುರಾಮ ವಾಗ್ಮೊರೆ ಸೇರಿದಂತೆ ಅನೀಲ್ ಸೊಲನಕರ್, ಬಾಲಾಪರಾಧಿ ರಾಕೇಶ ಮಠ, ಮಲ್ಲನಗೌಡ ಪಾಟೀಲ್, ಓರ್ವ ಬಾಲ ಅರೋಪಿ, ರೋಹಿತ ನಾವಿ, ಸುನೀಲ್ ಅಗಸರ ಹಾಗೂ ಅರುಣ ವಾಗ್ಮೊರೆ ಹಾಜರು ಪಡಿಸಲಾಯಿತು. Ipc saction 124 153 120b ಅಡಿಯಲ್ಲಿ ಕೇಸ್ ದಾಖಲಾಗಿತ್ತು ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಒಂದನೇ ಹೆಚ್ವುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶೆ ಕೆ.ಬಿ.ಗೀತಾ ಆದೇಶ ನೀಡಿದರು.

ಬಳಿಕ ಮಾಧ್ಯಮಗಳಿಗೆ ಪ್ರಕರಣ ಕುರಿತು ಮಾಹಿತಿ ನೀಡಿದ ಆರೋಪಿಗಳ ಪರ ವಕೀಲ ಎಸ್.ಎಚ್.ಲಗಳಿ Ipc saction 124 153 120b ಅಡಿಯಲ್ಲಿ ಕೇಸ್ ದಾಖಲಾಗಿತ್ತು, ಪ್ರತ್ಯಕ್ಷ ಸಾಕ್ಷಿಗಳ ಕೊರತೆ ಹಿನ್ನಲೆ, ತಾಂತ್ರೀಕ ಅಡತಡೆ ಕಾರಣದಿಂದಾಗಿ ಆರೋಪಮುಕ್ತಿಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ ಎಂದ್ರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕೋರ್ಟ್ ಆವರಣದಲ್ಲಿ ವಾಗ್ಮೋರೆ ತಂದೆ ಅಶೋಕ, ತಾಯಿ ಕಮಲಾಬಾಯಿ ಸೇರಿದಂತೆ ಕುಟುಂಬದ ಸದಸ್ಯರು ಬೀಡು ಬಿಟ್ಟಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com