ಸಂಸತ್ತಿನಲ್ಲಿ ರಾಹುಲ್ ಪ್ರಧಾನಿಯನ್ನು ಅಪ್ಪಿಕೊಂಡದ್ದು ಶೋಭೆ ತರುವಂತದ್ದಲ್ಲ : ಭಗವಂತ್ ಖೂಬಾ

ಬೀದರ್ : ಅವಿಶ್ವಾಸ ನಿರ್ಣಯದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನ ಅಪ್ಪಿಕೊಂಡಿರುವುದಕ್ಕೆ, ಬಿಜೆಪಿ ಸಂಸದ ಭಗವಂತ ಖೂಬಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ ರಾಹುಲ್ ಗಾಂಧಿ ಮೋದಿಯವರಿಗೆ ಹಸ್ತಲಾಘವ ಮಾಡಬೇಕಿತ್ತು. ಅದನ್ನು ಬಿಟ್ಟು ಅವರನ್ನು ಅಪ್ಪಿಕೊಂಡು ಶೋಭೆ ತರವಂತದಲ್ಲ ‘ ಎಂದರು.

ಇನ್ನು ನರೇಂದ್ರ ಮೋದಿಯವರ ವಿರುದ್ಧ ಮಹಾ ಘಟಬಂದನ್ ರಚನೆ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಹಾಸ್ಯಕ್ಕೆ ಈಡು ಮಾಡುತ್ತದೆ ಎಂದು ವ್ಯಂಗ್ಯವಾಡಿದರು.‌ ಅಲ್ಲದೇ ರೈತರ ಸಾಲಮನ್ನಾ ಆದ್ರೂ ರಾಜ್ಯದ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ಬೀದರ್ ಜಿಲ್ಲೆಯಲ್ಲಿ ಸಾಲಮನ್ನಾ ನಂತರವು ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಯಾವ ಜನಪ್ರತಿನಿಧಿಯು ಭೇಟಿ ನೀಡದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published.