ಮೈಸೂರು : ಜೀಪ್ ಟೈರ್ ಸಿಡಿದು ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ…!

ಮೈಸೂರು : ಜೀಪ್ ನ ಹಳೆಯ ಟೈರ್ ಸ್ಪೋಟಗೊಂಡು ಅಗ್ನಿ ಅವಘಡ ಸಂಭವಿಸಿ ಒಂದು ಜೀಪ್ ಹಾಗೂ ಮೂರು ಬೈಕ್ ಗಳು ಸುಟ್ಟು ಕರಕಲಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ಮಿನಿ ವಿಧಾನಸೌಧದ ಅವರಣದಲ್ಲಿ ನಡೆದಿದೆ.

ಟಿ.ನರಸೀಪುರದ ಮಿನಿ ವಿಧಾನಸೌಧದ ಪಾರ್ಕಿಂಗ್ ಮಾಡುವ ಜಾಗದಲ್ಲಿ ಈ ಅವಘಡ ಸಂಭವಿಸಿದ್ದು, ಅಲ್ಲಿಯೇ ನಿಲ್ಲಿಸಿದ್ದ ಜೀಪಿನ ಹಳೆಯ ಟೈರ್ ಇದ್ದಕ್ಕಿದಂಥೆ ಸ್ಪೋಟಗೊಂಡಿದೆ. ಇದರಿಮಧ ಬೆಂಕಿ ಆವರಿಸಿದ್ದು, ಅಗ್ನಿ ಅವಘಡದಿಂದಾಗಿ ಅಲ್ಲಿಯೇ ಇದ್ದ ತಹಶೀಲ್ದಾರ್ ಜೀಪ್ ಮತ್ತು ಬೈಕ್ ಗಳು ಬೆಂಕಿಗಾಹುತಿಯಾಗಿದೆ.

Fire - T Narasipura -mini vidhansoudha- Tahsildar- jeep -three bike burn.

ಅಲ್ಲಿಯೇ ನಿಲ್ಲಿಸಿದ್ದ ಜೀಪಿನ ಹಳೆಯ ಟೈರ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಇದರಿಂದ ಬೆಂಕಿ  ಆವರಿಸಿದ್ದು, ಅಗ್ನಿ ಅವಘಡದಿಂದಾಗಿ ಅಲ್ಲಿಯೇ ಇದ್ದ ತಹಶೀಲ್ದಾರ್ ಜೀಪ್ ಮತ್ತು ಮೂರು ಬೈಕ್ ಗಳು ಬೆಂಕಿಗಾಹುತಿಯಾಗಿವೆ. ಸದ್ಯ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com