ಒಂದೂವರೆ ವರ್ಷದ ಮಗು ಮೃತ : ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಎಂದು ಆರೋಪ…

ಮೈಸೂರು : ಒಂದೂವರೆ ವರ್ಷದ ಮಗು ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ. ಸುಭಾಗ್ ಹೆಸರಿನ ಒಂದೂವರೆ ವರ್ಷದ ಗಂಡು ಮಗು   ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು  ಆರೋಪಿಸುತ್ತಿದ್ದಾರೆ.

ಹೆಚ್.ಡಿ.ಕೋಟೆ ಪಟ್ಟಣದ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ‌ ನಿರ್ಮಾಣವಾಗಿದ್ದು. ಜ್ವರ ಕೆಮ್ಮಿನಿಂದ ನಿನ್ನೆ ಬೆಳಗ್ಗೆ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಧ್ಯಾಹ್ನ ವೇಳೆ‌ಗೆ ಆಸ್ಪತ್ರೆಯ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಏಕಾಏಕಿ ಹೇಳಿದ್ದಾರೆ. ವೈದ್ಯರ ಹೇಳಿಕೆಯಿಂದ ಕಂಗಾಲಾದ ಪೋಷಕರು ಆಸ್ಪತ್ರೆ ವೈದ್ಯರೊಡನೆ ಮಾತಿನ ಚಕಮಕಿಗಿಳಿದಿದ್ದು ಮಗುವನ್ನ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿ ಸಾಯಿಸಿದ್ದಾರೆಂದು ವೈದ್ಯರ ವಿರುದ್ದ ಆರೋಪಿಸಿದ್ದಾರೆ.

child-dies-hospital-family-anger-against-doctors

ಇದಕ್ಕೂ ಮೊದಲು ಮಗುವಿಗೆ ಉಸಿರಾಟದ ತೊಂದರೆ ಇದ್ದು, ಮಗುವಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಹೀಗಾಗಿ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಜತೆಗೆ ಮಗು ದಾರಿ ಮಧ್ಯೆ ಸಾಯುವ ಸಾಧ್ಯತೆಗಳು ಇವೆ ಎಂದು ವೈದ್ಯರು ಪೋಷಕರಿಗೆ ಹೇಳಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಆದರೆ ಈ ಮಾತನ್ನ ಆಸ್ಪತ್ರೆಗೆ ಆಗಮಿಸುವ ಮುನ್ನವೇ ಹೇಳಬೇಕಿತ್ತು ಎಂದು ಸುಭಾಗ್ ಪೋಷಕರು ವೈದ್ಯರಿಗೆ ತರಾಟೆ ತೆಗೆದುಕೊಂಡಿದ್ದು ಪೊಲೀಸರ ಸಮ್ಮುಖದಲ್ಲೇ ಮಾತಿನ ಚಕಮಕಿ ನಡೆಸಿದ್ದಾರೆ. ಸಂಜೆವರೆಗೂ ಆಸ್ಪತ್ರೆಯಲ್ಲಿ ಮಗು ಇಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪ-ಪ್ರತ್ಯಾರೋಪದ ನಂತರ ಹೆಚ್.ಡಿ.ಕೋಟೆ ಠಾಣಾ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಸುಭಾಗ್ ಪೋಷಕರು ಆಸ್ಪತ್ರೆ ವೈದ್ಯರ ವಿರುದ್ಧ ದೂರು ದಾಖಲಿಸಲು ಚಿಂತನೆ ನಡೆಸಿದ್ದಾರೆ.

 

Leave a Reply

Your email address will not be published.