Football : ಜನಾಂಗೀಯ ಭೇದ ಹಿನ್ನೆಲೆ : ಜರ್ಮನಿ ತಂಡ ತೊರೆದ ಮಿಡ್‍ಫೀಲ್ಡರ್ ಮೆಸುಟ್ ಒಜಿಲ್

ಜನಾಂಗೀಯ ಭೇದ ನೀತಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಮಿಡ್ ಫೀಲ್ಡರ್ ಮೆಸುಟ್ ಒಜಿಲ್ ಜರ್ಮನ್ ಫುಟ್ಬಾಲ್ ತಂಡವನ್ನು ತೊರೆದಿದ್ದಾರೆ. ‘ ಇತ್ತೀಚಿನ ಕೆಲ ಕಹಿ ಘಟನೆಗಳಿಂದಾಗಿ ತುಂಬಾ ಮನನೊಂದಿದ್ದೇನೆ. ಇನ್ನು ಮುಂದೆ ಜರ್ಮನ್ ತಂಡದ ಪರವಾಗಿ ಆಡುವುದಿಲ್ಲ, ಸಾಕಷ್ಟ ಬಾರಿ ಯೋಚಿಸಿ ಭಾರವಾದ ಹೃದಯದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ‘ ಎಂದು ಟ್ವಿಟರ್ ನಲ್ಲಿ ಓಜಿಲ್ ತಿಳಿಸಿದ್ದಾರೆ.

Image result for mesut ozil erdogan

ಮೂಲತಃ ಟರ್ಕಿ ದೇಶದವರಾದ ಮೆಸುಟ್ ಓಜಿಲ್ ಮೇ ತಿಂಗಳಲ್ಲಿ ಟರ್ಕಿ ಅಧ್ಯಕ್ಷರಾದ ರೆಸೆಪ್ ಟಯಿಪ್ ಎರ್ಡೋಗಾನ್ ಅವರೊಂದಿಗೆ ಫೋಟೊ ಒಂದಕ್ಕೆ ಪೋಸ್ ನೀಡಿದ್ದರು. ಈ ಘಟನೆಯೇ ವಿವಾದಕ್ಕೆ ಕಾರಣವಾಗಿದ್ದು, ಮೆಸುಟ್ ಓಜಿಲ್ ಜರ್ಮನಿ ತಂಡಕ್ಕೆ ನಿಷ್ಠರಾಗಿಲ್ಲ ಎಂಬಂತಹ ಮಾತುಗಳು ಕೇಳಿಬಂದಿದ್ದವು.

ಇತ್ತೀಚೆಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಜರ್ಮನ್ ಫುಟ್ಬಾಲ್ ತಂಡ ಗ್ರೂಪ್ ಹಂತವನ್ನೂ ಸಹ ದಾಟದೇ ನಿರ್ಗಮಿಸಿತ್ತು. ಮೆಸುಟ್ ಓಜಿಲ್ 2014ರಲ್ಲಿ ವಿಶ್ವಕಪ್ ಗೆದ್ದ ಜರ್ಮನಿ ತಂಡದ ಸದಸ್ಯರಾಗಿದ್ದರು. ಕ್ಲಬ್ ಹಂತದ ಫುಟ್ಬಾಲ್ ನಲ್ಲಿ ಓಜಿಲ್ ಅರ್ಸೆನೆಲ್ ಪರವಾಗಿ ಆಡುತ್ತಾರೆ.

Leave a Reply

Your email address will not be published.