ಕಾಬೂಲ್ : ವಿಮಾನ ನಿಲ್ದಾಣದ ಬಳಿ ISIS ಸೂಸೈಡ್ ಬಾಂಬ್ ದಾಳಿ : 14 ಜನರ ದುರ್ಮರಣ

ಅಫಘಾನಿಸ್ತಾನ ರಾಜಧಾನಿ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರವಿವಾರ ಉಗ್ರನೋರ್ವ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 14 ಜನ ಮೃತಪಟ್ಟಿದ್ದು, 60 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊರದೇಶದಿಂದ ಮರಳಿ ಬರುತ್ತಿದ್ದ ಅಫಘಾನಿಸ್ತಾನದ ಉಪಾಧ್ಯಕ್ಷ ಅಬ್ದುಲ್ ರಾಶಿದ್ ದೊಸ್ತುಮ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜನ ನೆರೆದಿದ್ದರು.

Image result for kabul airport bomb 14

ಉಪಾಧ್ಯಕ್ಷ ಅಬ್ದುಲ್ ರಾಶಿದ್ ದೊಸ್ತುಮ್ ಅವರನ್ನು ಸ್ವಾಗತಿಸಿದ ಬಳಿಕ ರಾಜಕೀಯ ನಾಯಕರು, ಸರ್ಕಾರೀ ಅಧಿಕಾರಿಗಳು, ಬೆಂಬಲಿಗರು ಹಿಂದಿರುಗುವ ವೇಳೆ ಸ್ಫೋಟ ಸಂಭವಿಸಿದ್ದು, 14 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಬ್ದುಲ್ ರಾಶಿದ್ ದೊಸ್ತುಮ್ ಸುರಕ್ಷಿತರಾಗಿದ್ದು, ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ಅವರ ವಕ್ತಾರ ಬಶೀರ್ ಅಹ್ಮದ್ ತಯಾಂಜ್ ತಿಳಿಸಿದ್ದಾರೆ.

Image result for kabul airport bomb 14

ಮೃತಪಟ್ಟವರಲ್ಲಿ ರಕ್ಷಣಾ ದಳ ಹಾಗೂ ಟ್ರಾಫಿಕ್ ಪೋಲೀಸ್ ಪಡೆಯ 9 ಜನ ಸೇರಿದ್ದಾರೆ ಎಂದು ಕಾಬೂಲ್ ಪೋಲೀಸ್ ಇಲಾಖೆಯ ವಕ್ತಾರರಾದ ಹಶ್ಮತ್ ಸ್ಟಾನಿಕ್ ಜಾಯ್ ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com