ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ‌ಸಾಧ್ಯವಿಲ್ಲ : ಜಗದೀಶ್ ಶೆಟ್ಟರ

ಹುಬ್ಬಳ್ಳಿ : ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ‌ಸಾಧ್ಯವಿಲ್ಲ. ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಮೋದಿಯವರ ನಡೆ ಹಾಗೂ ಅವರ ಅಭಿವೃದ್ದಿಯೇ ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ, ಆಗಾಗಿ ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.

ತೃತೀಯರಂಗ ನಾಯಕತ್ವಕ್ಕೆ‌ ಯಾರೂ ಒಪ್ಪಿಕೊಳ್ಳುವುದಿಲ್ಲ, ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುವುದು ಖಚಿತ ತೃತೀಯರಂಗದಲ್ಲಿ ಅವರಲ್ಲೇ ಒಗ್ಗಟ್ಟಿಲ್ಲ ಆದರಿಂದ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯಾಗಿ ಮಾಡಲು ಸಾಧ್ಯವಿಲ್ಲ,  ರಾಗಾ ಅವರನ್ನು ಪ್ರಧಾನಿಯಾಗಿ ಮಾಡಲಿದ್ದೇವೆ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಲಿ. ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ‌ಸಾಧ್ಯವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಇನ್ನ ಬಜೆಟ್ ನಲ್ಲಿ 55 ಸಾವಿರ ಕೋಟಿ ಬಿಡುಗಡೆ ಮಾಡಿರುವುದನ್ನು ಅಂಕಿಸಂಖ್ಯೆಯ ಮೂಲಕ ಸ್ಪಷ್ಟಪಡಿಸಲಿ, ಯಾವ ಯಾವ ಇಲಾಖೆಗೆ ಬಿಡುಗಡೆ ಮಾಡಿದ್ದಾರೆ ಎಂಬುದನ್ನ ಸ್ಪಷ್ಟಪಡಿಸಿ.  ಮುಖ್ಯಮಂತ್ರಿಗಳು ಬಜೆಟ್ ನ ಪ್ರತಿ ಶೀಘ್ರವೇ ಬಿಡುಗಡೆ ಮಾಡಲಿ, ಬಜೆಟ್ ಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿರುವುದರಲ್ಲಿ ಅರ್ಥವೇ ಇಲ್ಲ ರಾಜ್ಯದ 50 ಹೊಸ ತಾಲೂಕುಗಳಲ್ಲಿ 38 ತಾಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಪ್ರತಿ ತಾಲೂಕಿಗೆ ಕನಿಷ್ಟ 5 ಕೋಟಿ ಅನುದಾನ ಬಿಡುಗಡೆ ಮಾಡಲಿ, ಮುಖ್ಯಮಂತ್ರಿಗಳು ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಯಾರ ಕಾಲದಲ್ಲಿ ಎಷ್ಟು ಅನುದಾನ ಖರ್ಚಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಿ,  ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನ್ಯಾಯದ ಆಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

 

 

One thought on “ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ‌ಸಾಧ್ಯವಿಲ್ಲ : ಜಗದೀಶ್ ಶೆಟ್ಟರ

Leave a Reply

Your email address will not be published.

Social Media Auto Publish Powered By : XYZScripts.com