ಸಿಂಹಗಳ ಬಾಯಿಯಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ : ಅದು ಹೇಗೆ ಅಂತೀರ ಇಲ್ಲಿದೆ ನೋಡಿ….?

ಅಮ್ರೇಲಿ : ನರಭಕ್ಷಕ ಮೂರು ಸಿಂಹಗಳ ಬಾಯಿಯಿಂದ ತನ್ನ ಮಾಲೀಕನನ್ನು ರಕ್ಷಿಸಿಕೊಂಡಿದೆ ಶ್ವಾನ.  ಗುಜರಾತ್​ನ ಅಮ್ರೇಲಿಯ ಅಂಬಾರ್ಡಿ ಗ್ರಾಮದಲ್ಲಿ ಸಿಂಹಗಳ ದಾಳಿಗೆ ಒಳಗಾದ ಮಾಲೀಕನ ಜೊತೆಗಿದ್ದ ಶ್ವಾನ ಆತನನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದೇ 21ರಂದು 25 ವರ್ಷದ ಭಾವೇಶ್ ಹಮೀರ್ ಭರ್ವಾದ್ ಎಂಬಾತ  ಕುರಿಗಳನ್ನು ಮೇಯಿಸಲು ಹೋಗಿದ್ದ ವೇಳೆ ಮೂರು ಸಿಂಹಗಳು ಕುರಿಗಳ ಮೇಲೆ ದಾಳಿ ಮಾಡಿದ್ದವು. ಅಂತೆಯೇ, ಕುರಿಗಾಯಿ ಭಾವೇಶ್ ತನ್ನ ಕುರಿಗಳನ್ನು ಕಾಪಾಡಿಕೊಳ್ಳಲು ಮುಂದಾಗಿದ್ದ. ಅಷ್ಟರಲ್ಲೇ, ಮೂರು ಸಿಂಹಗಳು ಮೂರು ಕುರಿಗಳನ್ನು ಕೊಂದು ಹಾಕಿವೆ. ಜೊತೆಗೆ ಭಾವೇಶ್ ಮೇಲೆ ಎರಗಲು ಶುರು ಮಾಡಿವೆ. ಆಗ ಭಾವೇಶ್​ ಜೊತೆಗೆ ಶ್ವಾನ ಜೋರಾಗಿ ಬೋಗಳಲಾರಂಭಿಸಿ ಸಿಂಹಗಳು ಮುಂದೆ ಬರದಂತೆ ತಡೆದಿದೆ. ಶ್ವಾನದ ಸತತ ಕೂಗಾಟ ಕೇಳಿಸಿಕೊಂಡ ಸ್ಥಳೀಯರು, ತಕ್ಷಣವೇ ಓಡಿ ಬಂದಿದ್ದಾರೆ. ಇದರಿಂದ ಸಿಂಹಗಳು ಗಾಬರಿಗೊಂಡು ಸ್ಥಳದಿಂದ ಪರಾರಿಯಾಗಿತ್ತು.

ಇತ್ತ, ಸಿಂಹಗಳ ದಾಳಿಯಿಂದ ಭಾವೇಶ್​ಗೆ ಗಾಯಗೊಂಡಿದ್ದಾನೆ. ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಮನಾರ್ಹ ಅಂದರೆ, ಈ ಸಿಂಹಗಳಲ್ಲಿ ಶ್ವಾನಕ್ಕೆ ಯಾವುದೇ ಗಾಯಗಳಾಗಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com