ಉಚಿತ ಬಸ್ ಪಾಸ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ, ಖಾಸಗಿ ಶಾಲೆ ಮಕ್ಕಳಿಗಲ್ಲ : HDK

ರಾಮನಗರ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೇಳಿಕೆ ನೀಡಿದ್ದಾರೆ. ‘ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ, ಚನ್ನಪಟ್ಟಣ ಕ್ಷೇತ್ರದ ಜನತೆ ಋಣ ನನ್ನ ಮೇಲೆ ಇದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜವಾಬ್ದಾರಿ ನನ್ನ ಮೇಲಿದೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಕ್ಕೆ ೨೪ ಗಂಟೆ ಕುಡಿಯುವ ನೀರು ಒದಗಿಸಲಾಗುವುದು ‘ ಎಂದು ಹೇಳಿದ್ದಾರೆ.

‘ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ಸೆಪ್ಟೆಂಬರ್‌ ತಿಂಗಳ ವರೆಗೆ ಬಿಡಬೇಕಿದ್ದ ಕಾವೇರಿ ನೀರನ್ನ ತಮಿಳುನಾಡಿಗೆ ಬಿಡಲಾಗಿದೆ. ಸದ್ಯಕ್ಕೆ ಕಾವೇರಿ ನೀರಿನ ಹಂಚಿಕೆ ವಿರುದ್ದ ನಮಗೂ ತಮಿಳುನಾಡಿಗೆ ಆಗುವ ಸಂಘರ್ಷ ನಿಂತಿದೆ. ಹಾಲು ಉತ್ಪಾದಕರಿಗೆ ಸಹಾಯ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ನೂತನ ಐದು ಮೇಘಾ ಡೈರಿ ಸ್ಥಾಪನೆ ಮಾಡಲಾಗುವುದು ‘ ಎಂದರು.

‘ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರವನ್ನ ಅವಳಿ ನಗರವನ್ನಾಗಿ ಘೋಷಣೆ ಮಾಡಲಾಗುವುದು, ಇದೇ ವರ್ಷದಲ್ಲಿ 2 ಸಾವಿರ ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ರಾಮನಗರ – ಚನ್ನಪಟ್ಟಣ ಹೆದ್ದಾರಿ ಮಧ್ಯ ೫೦೦ ಎಕರೆ ಪ್ರದೇಶದಲ್ಲಿ ರೇಷ್ಮೆ ಸೂಪರ್ ಮಾರುಕಟ್ಟೆ ಮಾಡಲಾಗುವುದು ‘ ಎಂದಿದ್ದಾರೆ.

ರೈತರ ಸಾಲ ಮನ್ನ ವಿಚಾರವಾಗಿ ಮಾತಣಾಡಿದ ಅವರು ‘ ದೇಶದ ಯಾವುದೇ ರಾಜ್ಯ ಮಾಡದ ರೈತರ ಸಾಲ ಮನ್ನ ಈ ನಿಮ್ಮ ಕುಮಾರಸ್ವಾಮಿ ಮಾಡಿದ್ದೇನೆ ‘ ಎಂದಿದ್ದಾರೆ.

‘ ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಆ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಖಾಸಗಿ ಶಾಲಾ ಮಕ್ಕಳಿಗೆ ಇಲ್ಲ ಉಚಿತ ಬಸ್ ಬಾಸ್ ನೀಡಲಾಗುವುದಿಲ್ಲ, ಬಡ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ನನಗೂ ರಾಜಕೀಯ ಮಾಡಲು ಬರುತ್ತೆ. ನಾಳೆ ಅಧಿಕಾರಿಗಳ‌ ಸಭೆ ಕರೆದು ತೀರ್ಮಾನ ಮಾಡಲಾಗುವುದು ‘ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೇಳಿಕೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com