ಬಾಗಲಕೋಟೆ : ವಿದ್ಯಾರ್ಥಿಯ ಮೇಲೆ ಅಮಾನುಷ ಹಲ್ಲೆ : ಡ್ಯಾನ್ಸ್ ಟೀಚರ್ ಸಸ್ಪೆಂಡ್..!

ವಿದ್ಯಾರ್ಥಿನಿಯರ ಮೇಲೆ ಡ್ಯಾನ್ಸ್ ಟೀಚರ್ ಹಲ್ಲೆ ಮಾಡಿದ್ದನ್ನು ಪ್ರಿನ್ಸಿಪಾಲ್ ಗೆ ದೂರು ನೀಡಿದ್ದಾನೆಂದು ಆರೋಪಿಸಿ ನಾಲ್ಕನೇ ತರಗತಿ ವಿದ್ಯಾರ್ಥಿ ಮೇಲೆ ಗಂಭೀರ ಹಲ್ಲೆ ಮಾಡಲಾಗಿದೆ. ಬಾಗಲಕೋಟೆ ನಗರದ ಹೊರವಲಯದಲ್ಲಿನ ರಂಗನಾಥ ಇಂಟರ್ ನ್ಯಾಷನಲ್ ಶಾಲೆಯ ವಸತಿ ನಿಲಯದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಶುಭಂ ಅಂಗಡಿ ಎಂಬ ವಿಧ್ಯಾರ್ಥಿಗೆ ಡ್ಯಾನ್ಸ್ ಟೀಚರ್ ಮತ್ತು ಹಾಸ್ಟೆಲ್ ವಾರ್ಡನ್ ಆಗಿದ್ದ ಓಂ ರಜಪೂತ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾರೆ.

ಜೊತೆಗೆ ಈತನ ಹೇಳಿಕೆ ಮೇರೆಗೆ ಎಂಟು ಮತ್ತು ಒಂಬತ್ತನೇ ತರಗತಿ ವಿಧ್ಯಾರ್ಥಿಗಳಾದ ತೇಜಸ್, ಸಮರ್ಥ ಹಲ್ಲೆ ಮಾಡಿದ್ದಾರೆ. ಮುಖ ಮತ್ತು ಬೆನ್ನಿಗೆ ವಿಧ್ಯಾರ್ಥಿಗಳು ಮಂಚದ ರಾಡ್ ನಿಂದ ಥಳಿಸಿದ್ದಾರೆ. ಜೊತೆಗೆ ಚಪ್ಪಲಿ ಹಾಕಿಕೊಂಡು ಒದ್ದಿದ್ದಾರೆ. ಇದರಿಂದ ವಿಧ್ಯಾರ್ಥಿ ಗೆ ಬಾಸುಂಡೆಗಳು ಕಾಣಿಸಿಕೊಂಡಿವೆ. ಜುಲೈ 17 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ‌ ಮಹಲಿಂಗಪುರ ನಿವಾಸಿಯಾಗಿದ್ದು, ಪುರಸಭೆ ಮಾಜಿ ಅಧ್ಯಕ್ಷ ಶೇಖರ್ ಅಂಗಡಿ ಪುತ್ರನಾಗಿದ್ದಾನೆ. ಮಗನ ಗಾಯ ಕಂಡು ತಾಯಿ ಅರುಣಾ ಕಣ್ಣೀರು ಹಾಕಿದ್ದಾರೆ. ಘಟನೆ ಬಗ್ಗೆ ದೂರು ಸಲ್ಲಿಸೋದಾಗಿ ಪೋಷಕರು ಹೇಳಿದ್ದಾರೆ.ಇನ್ನು ವಿಧ್ಯಾರ್ಥಿ ಗೆ ಹಲ್ಲೆ ಮಾಡಿದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ಡ್ಯಾನ್ಸ್ ಟೀಚರ್ ಮತ್ತು ಇಬ್ಬರು ವಿಧ್ಯಾರ್ಥಿಗಳನ್ನು ಅಮಾನತ್ತು ಮಾಡಿದ್ದಾರೆ.

ಡ್ಯಾನ್ಸ್ ಟೀಚರ್ ಓಂ ರಜಪೂತ ವಿಧ್ಯಾರ್ಥಿನಿಯರಿಗೆ ಹೊಡೆದಿದ್ದ. ಈ ಬಗ್ಗೆ ವಿಧ್ಯಾರ್ಥಿನಿಯರು ಪ್ರಿನ್ಸಿಪಾಲ್ ಗೆ ದೂರು ನೀಡಿದ್ದರು. ಆದರೆ ದೂರನ್ನು ವಿದ್ಯಾರ್ಥಿ ಶುಭಂ ನೀಡಿದ್ದಾನೆ ಎಂದು ತಿಳಿದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com