ಕೊಪ್ಪಳ : ಅರ್ಚಕರ ನಡುವೆ ತಿಕ್ಕಾಟ : ಸರ್ಕಾರದ ವಶಕ್ಕೆ ಅಂಜನಾದ್ರಿ ಪರ್ವತ ದೇವಸ್ಥಾನ

ಕೊಪ್ಪಳ : ಅಂಜನಾದ್ರಿ ಪರ್ವತ ದೇವಸ್ಥಾನವನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ಇರುವ ಅಂಜನಾದ್ರಿ ಪರ್ವತದಲ್ಲಿರುವ ದೇವಸ್ಥಾನದಲ್ಲಿ ಕಳೆದ 2 ವರ್ಷಗಳಿಂದ ಅರ್ಚಕರ ನಡುವೆ ತಿಕ್ಕಾಟ ನಡೆದಿದೆ.

ಅರ್ಚಕರ ನೇಮಕಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ವಿದ್ಯಾದಾಸ ಬಾಬಾ ನಡುವೆ ಗಲಾಟೆ ನಡೆದಿತ್ತು. ಎಸ್.ಪಿ ಅನೂಪ್ ಶೆಟ್ಟಿ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಕೊಪ್ಪಳ ಡಿಸಿ ಎಂ. ಕನಗವಲ್ಲಿ ಆದೇಶ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಸ್ಥಳಕ್ಕೆ ಗಂಗಾವತಿ ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್, ಸಿ.ಪಿ.ಐ ದೀಪಕ್ ಬುಸರೆಡ್ಡಿ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿದ್ದ ಚಿನ್ನಾಭರಣ, ಬೆಳ್ಳಿ, ತಾಮ್ರ ಮತ್ತು ದಾಖಲೆಗಳನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿ ಸರ್ಕಾರದ ಸುಪರ್ದಿಯಲ್ಲಿದೆ ಎಂದು ನೋಟಿಸ್ ಅನ್ನು ತಹಶೀಲ್ದಾರ್ ಹಾಕಿದ್ದಾರೆ. ಇಂದಿನಿಂದ ಸರ್ಕಾರದ ಅಧೀನದಲ್ಲಿರಲಿದೆ.

One thought on “ಕೊಪ್ಪಳ : ಅರ್ಚಕರ ನಡುವೆ ತಿಕ್ಕಾಟ : ಸರ್ಕಾರದ ವಶಕ್ಕೆ ಅಂಜನಾದ್ರಿ ಪರ್ವತ ದೇವಸ್ಥಾನ

Leave a Reply

Your email address will not be published.